ಒಟ್ಟು 70 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್ ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗಯುಗ್ಮದೊಳ್ ನಿರತಿಶಯಾನುಭಾವಭವನಪ್ಪ ಮಹಾನೃಪತುಂಗ ದೇವನಾ ದರದೊಳೆ ಪೇೞ್ದ ಮಾರ್ಗಗತಿಯಿಂ ತಱೆಸಲ್ಗಿದನಿಂತೆ ಕಬ್ಬಿಗರ್
--------------
ಶ್ರೀವಿಜಯ
ಪರಿತಾಪಮನೆನಗೆ ನಿಶಾ ಕರನಾಗಿಸುಗುಂ ವಸಂತಸಮಯಾನುಗತಂ ಸುರಭಿಸಮಯೋದಿತಮ ಹಿಮ ಕರನರಿಲಂ ಪಡೆವನೆಂಬುದಿದು ವಿಪರೀತಂ ವಿಪರೀತಂ : ವಿಪರ್ಯಯಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂ ಜನಿತಮುದಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂದುರುಮುದದಿಂ
--------------
ಶ್ರೀವಿಜಯ
ಪರಿವೃತ ನೃಪತುಂಗದೇವಮಾರ್ಗಾಂ ತರಗತಬೋಧ ವಿಶೇಷಯಾನಪಾತ್ರಂ ಪರಮಗುಣ ಪರೀತಕಾವ್ಯರತ್ನಾ ಕರದುರುಪಾರಮನೆಯ್ದುಗುಂ ಮಹಾತ್ಮಂ
--------------
ಶ್ರೀವಿಜಯ
ಪ್ರತಿಪದಾರ್ಥತತ್ತ್ವಭೇದದೊಳ್ ಪ್ರತಿಷೇಧಮಂ ನೆಗೞ್ಗುಮನಿತೆ ಮಾೞ್ಕಿಯಿಂ ದತಿಶಯಾಕ್ಷೇಪಗಣನಾವ್ಯತಿ ಗತಿ ನೃಪತುಂಗದೇವಮಾರ್ಗದೊಳ್
--------------
ಶ್ರೀವಿಜಯ
ಬಗೆದರ್ಥಮನಱಿಪದೆ ಮೆ ಲ್ಲಗೆ ತಿರ್ದುನ ಬಗೆಯನದಱ ನೆವದಿಂ ಪೆಱತಂ ನಿಗದಿಸುವುದು ಪರ್ಯಾಯೋ ಕ್ತಗತಾಳಂಕಾರಮದಱ ಪಾಂಗಿಂತಕ್ಕುಂ
--------------
ಶ್ರೀವಿಜಯ
ಬಗೆದಿಂಗಿತಬೇಷ್ಟಾಕಾ ರಗತಂಗಳಿನಂತರಂಗದೊಳ್ ಮರೆಸಿದುದಂ ಮಿಗೆ ಸೂಚಿಸುವುದು ಸೂಕ್ಷ್ಮಾ ನುಗತಾಳಂಕಾರಮಿಂತು ತದುದಾಹರಣಂ
--------------
ಶ್ರೀವಿಜಯ
ಬಗೆದು ಮಾರ್ಗದ್ವಿತಯಗತಿಗಳಂ ಪ್ರಗುಣಗುಣಗಣೋದಯರ್ಕಳ್ ವಿತರ್ಕದಿಂ ಸೊಗಯಿಸುವಂತು ವಚನರಚನೆಯಿಂ ನೆಗೞ್ದಿರೆ ಬೆರಸಿ ಪೇೞ್ಗಿ ರಸವಿಶೇಷದೊಳ್ (ವೃತ್ತ)
--------------
ಶ್ರೀವಿಜಯ
ಬರಿಸುವೆನಿಂದು ನಂದನವನಾಂತರದಲ್ಲಿಗೆ ಕಾಂತನಂ ಸಮಂ ತಿರಿಸುವೆನಂತನಂ [ಗ] ಸುಖಸಂಗತ ಮಂಗಳಕಾರಣಂಗಳಂ ತರಿಸುವೆನಾಂ ಮನೋನಯನವಲ್ಲಭನೊಳ್ ಮನದೊಂದಲಂಪಿನಿಂ ನೆರೆವೆನಮೋಘಮೆಂಬುದಿದು ದಕ್ಷಿಣಮಾರ್ಗವಿಶೇಷಭಾಷಿತಂ
--------------
ಶ್ರೀವಿಜಯ
ಬುಧಗುಣಗಣನಾತೀತಾಂತರಂ ಶಬ್ದತತ್ತ್ವಾಂ ಬುಧಿವಿವಿಧವಿಧಾನಾಲಂಕ್ರಿಯಾವೀ[ಚಿಮಾಲಾ] ವಿಧುರಗತಿ ವಿಲೋಡ್ಯಂ ತಳ್ತು ನಿಲ್ತಪ್ಪುದಾವಾ ಗಧಿಪವಚನಮಾಲಾಪಾವನೀಯಂ ಗ[ಭೀರಂ]
--------------
ಶ್ರೀವಿಜಯ
ಮಗುಳ್ದುಂ ಮಗುೞ್ದಾಮಾತಂ ನೆಗಳ್ದಿರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ ಸ್ವಗತಾಳಂಕಾರಂ ಬಗೆ ಗಗಾಧಮನರದಱ ತೆಱನನೀ ಕುಱಿಪುಗಳಿಂ
--------------
ಶ್ರೀವಿಜಯ
ಮನದೊಳಗಾಗಳುಂ ನಿಱೆ ಸದಾ ಮುಳಿಸಂ ಗತರಾಗ ಮೋಹನೊ ಯ್ಯನೆ ಮುನಿನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ ಮನದೊಳಗಾಗಳುಂ ನಿಱೆ ಸದೊಯ್ಯನೆ ಮೋಹಮನಂತೆ ರಾಗಮಂ ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯವಾಚಕಂ
--------------
ಶ್ರೀವಿಜಯ
ಮಲಯಾನಿಲನೊಯ್ಯನೆ ಪ ಣ್ತೆಲೆಯಂ ನೆಲೆಯಿಂ ಕಱಲ್ಚುಗುಂ ವಿಟಪಿಗಳೊಳ್ ವಿಲಸಿತ ಕಳಿಕಾಕುಳಕೋ ಮಲಾಂಕುರಮನಂತೆ ಪಡೆಗುಮವಱಿಡೆಯೆಡೆಯೊಳ್ ಜಾತ್ಯನುಗತ ಆದಿದೀಪಕಂ
--------------
ಶ್ರೀವಿಜಯ
ಮಾತಱೆ ವರ್ ಕೆಲಬರ್ ಜಗ ತೀತಳಗತ ಮನುಜರೊಳಗೆ ಮಾತಱೆ ವವರೊಳ್ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮ ಕವಿ ವೃಷಭರ್ಕಳ್
--------------
ಶ್ರೀವಿಜಯ