ಒಟ್ಟು 35 ಕಡೆಗಳಲ್ಲಿ , 1 ಕವಿಗಳು , 35 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವಿಪರೀತಂ ತರುತತಿಯ ವೊ ಲಪರಾಗಂ ಶುದ್ಧಭೂಮಿವೋಲ್ ಪದ್ಮಿನಿವೋ ಲುಪಗತವಿಭ್ರಮ ರಹಿತಂ ಕುಪಿತಾಕೃತಿಯೆಂಬುದುಪಮೆ ಸಂಧಾನಾಂಕಂ ಸಂಧಾನೋಪಮೆ
ವ್ಯಾಕರಣ ಕಾವ್ಯನಾಟಕ ಲೋಕಕಳಾ ಸಮಯಮಾದಳಂಕೃತಿಗಳೊಳಂ ವ್ಯಾಕುಳನಲ್ಲದನೇಕೆ ವಿ ವೇಕಬೃಹಸ್ಪತಿಯ ನಗರಮಂ ಪುಗುತರ್ಪಂ
ಶ್ರುತದುಷ್ಟಮರ್ಥದುಷ್ಟಂ ಶ್ರುತಿಕಷ್ಟಂ ಕಲ್ಪನೋಕ್ತಿಕಷ್ಟಮುಮೆಂದೀ ಕೃತಕೃತ್ಯಮಲ್ಲವಲ್ಲಭ ಮತದಿಂ ನಾಲ್ಕಕ್ಕುಮಿಲ್ಲಿ ಕೃತಿದೋಷಂಗಳ್
ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೊಳ್ ಕೊಡಿ ಚಿ ತ್ರಕರಂಬೋಲ್ ಪರಭಾಗಭಾವವಿಲಸದ್ವರ್ಣಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ ಮಾೞ್ಕಿಯಿಂ
ಸ್ತುತಿನಿಂದೆಗಳಿಂ ಸವಿವ ಕ್ಷಿತ ಗುಣದೊಳ್ ಸದೃಶಮಾಗಿ ಪೇೞ್ವುದು ಪೆಱತಂ ನುತ ಸದೃಶ್ಯಯೋಗಿತಾಲಂ ಕೃತಿಲಕ್ಷಣಮಕ್ಕುಮಿಂತು ತದುದಾಹರಣಂ