ಒಟ್ಟು 1590 ಕಡೆಗಳಲ್ಲಿ , 1 ಕವಿಗಳು , 511 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಗಮೆಂಬಂಬುಜದಲರಾ ನಗೆಯೆಂಬ ವಿಕಾಸಮೊಪ್ಪುವದಱೊಳ್ಸುೞಿಗುಂ ಮಿಗೆ ಕಣ್ಗಳೆಂಬ ತುಂಬಿಗ ಳೊಗೆದೊಸೆಗೆಯಿನೆನೆ ಸುಯುಕ್ತರೂಪಕಮಕ್ಕುಂ ಯುಕ್ತರೂಪಕಂ
--------------
ಶ್ರೀವಿಜಯ
ಮೊದಲ ಪದಂ ನ್ಯೂನಾಕ್ಷರ ಮದಱಿಂದೆ ಬೞಿಕ್ಕಮರ್ಧಮಧಿಕಾಕ್ಷರಮಿಂ ತಿದಱಿಂ ಛಂದೋಭಂಗಂ ಪದನಱಿದದನಿಂತು ಸಮಱಿ ಪೇೞ್ದೊಡೆ ಚೆಲ್ವಂ
--------------
ಶ್ರೀವಿಜಯ
ಮೊದಲೊಳ್ ಸಮಾಸಪದಮುಮ ನೊದವಿಸಿ ಪೇೞ್ದದಱ ತುದಿಯೊಳಸಮಾಸ ಪದಾ ಸ್ಪದಮಾಗಿ ನಿಱೆಸೆ ಕರ್ವ್ವಿನ ತುದಿಯಂತಿರೆ ವಿರಸಮಕ್ಕುಮದು ತೊದಳುಂಟೇ
--------------
ಶ್ರೀವಿಜಯ
ಯತಿಭಂಗಮರ್ಥಶೂನ್ಯಂ ಸತತ ವಿರುದ್ಧಾರ್ಥಮುಕ್ತಪುನರುಕ್ತಾರ್ಥಂ ಚ್ಯುತಯಾಥಾಸಂಖ್ಯಂ ವ್ಯವ ಹಿತಮಚ್ಛಂದಂ ವಿಸಂಧಿಕಂ ನೇಯಾರ್ಥಂ
--------------
ಶ್ರೀವಿಜಯ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
--------------
ಶ್ರೀವಿಜಯ
ರಾವಣನಂ ಕೊಂದು ಜಯ ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರ ಸೀತಾ ದೇವತೆಯ ತರ್ಪನ್ನೆಗ ಮೋವದೆ ಪುರುಷವ್ರತೋಚಿತಂ ವೀರರಸಂ ವೀರ
--------------
ಶ್ರೀವಿಜಯ
ರೂಪಕದೊಳಂ ವಿಶೇಷಾ ಳಾಪೋದ್ದೇಶದೊಳಮಲ್ಲದುೞಿ ದೆಡೆಗಳೊಳಂ ಚಾಪಳಮತಿಗಳ್ ವಿರಸ ಸ ಮೀಪಮನಿಡದಿರ್ಕೆ ಬಹು ವಿಶೇಷಣಗಣಮಂ
--------------
ಶ್ರೀವಿಜಯ
ರೂಪಕಮೆಂಬುದು ಪೆಱವಱ ರೂಪಾದಿಗುಣಂಗಳಾನಭೇದೋಕ್ತಿಗಳಿಂ ರೂಪಿಸುವುದಿಂತು ಬಾಹುಲ ತಾ ಪಾದಾಂಬುಜ ಮುಖೇಂದು ನಯನಾಳಿಗಳಿಂ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ಲೋಕಮದೂರ್ಧ್ವಾಧೋಮ ಧ್ಯಾಕಾಂಕ್ಷಿತಭೇದರೂಪದಿಂ ಮೂಱಕ್ಕುಂ ಲೋಕವಿರುದ್ಧಂ ತದ್ವ್ಯತಿ ರೇಕೋಕ್ತಿ ವಿವೇಕಿಲೋಕಗರ್ಹಿತ ಮಾರ್ಗಂ
--------------
ಶ್ರೀವಿಜಯ
ಲೌಕಿಕ ಸಾಮಯಿಕೋರು ವಿ ವೇಕಮುಮಭ್ಯುದಯ ಪರಮ ನಿಃಶ್ರೇಯಸಮುಂ ಪ್ರಾಕಟಮಕ್ಕುಂ ವಿದಿತಾ ನೇಕ ಕವೀಶ ಪ್ರಯೋಗ ಪದಪದ್ಧತಿಯೊಳ್
--------------
ಶ್ರೀವಿಜಯ
ವದನಂ ಮದೀಯಲೋಚನ ಮುದಾವಹಂ ಕಮಳಮಳಿಕುಳೋತ್ಸವಜನಕಂ ವಿದಿತ ವಿಭೇದಕ್ರಮಮಿಂ ತಿದಲ್ಲದಿಲ್ಲೆಂಬುದತಿಶಯೋಪಮೆ ಸತತಂ ಅತಿಶಯೋಪಮೆ
--------------
ಶ್ರೀವಿಜಯ
ವದನಮಿದಲ್ತಂಬುರುಹಂ ಮದಲೋಲವಿಲೋಚನಂಗಳಲ್ಲಮಿವಳಿಗಳ್ ಮುದಮಲ್ಲಿದು ವಿಕಸನಮೆಂ ಬಿದನಿಂಬೆನೆ ಬಗೆಗೆ ರೂಪಕಾಪಹ್ನುತಿಯಂ ರೂಪಕಾಪಹ್ನುತಿ
--------------
ಶ್ರೀವಿಜಯ
ವದನಾಂಬುಜರಂಗದೊಳೀ ಮದಾಲಸಭ್ರೂಲತಾವಿಲಾಸಿನಿ ಲೀಲಾ ಸ್ಪದ ನೃತ್ಯಮನಾಗಿಸಿದ ಪ್ಪುದಿದೆಂಬುದು ರೂಪಕೋರುರೂಪಕಮಕ್ಕುಂ ರೂಪಕ ರೂಪಕಂ
--------------
ಶ್ರೀವಿಜಯ
ವನರುಹದಳನಯನೆ ನಿ ನ್ನನೆ ನೆನೆನೆನೆದಿರು [ಳೊಳಗೊ] ಱಗದಿರೆ ಕಡೆಗಣ್ಗಳ್ ಮುನಿಸನಭಿನಯಿಪವೋಲ್ ಕೆ ಮ್ಮನೆ ರಕ್ತಾಂಭೋಜರುಚಿಯನಿೞ್ಕುಳಿಗೊಳ್ಗುಂ
--------------
ಶ್ರೀವಿಜಯ