ಒಟ್ಟು 27 ಕಡೆಗಳಲ್ಲಿ , 1 ಕವಿಗಳು , 26 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಿಸಿ ಶಬ್ದತತ್ತ್ವಸಮಯಸ್ಥಿತಿಯಂ ಕುಱಿ ತೊಂದಶೇಷಭಾ ಷಾವಿಷಯೋಕ್ತಿಯಂ ಬಗೆದುನೋಡಿ ಪುರಾಣಕವಿಪ್ರಭುಪ್ರಯೋ ಗಾವಿಳ ಸದ್ಗುಣೋದಯಮನಾಯ್ದವಱಿ೦ ಸಮೆದೊಂದು ಕಾವ್ಯದಿಂ ಶ್ರೀವಿಜಯಪ್ರಭೂತಮುದಮಂ ತನಗಾಗಿಸಿದೊಂ ಕವೀಶ್ವರಂ
--------------
ಶ್ರೀವಿಜಯ
ರಾವಣನಂ ಕೊಂದು ಜಯ ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರ ಸೀತಾ ದೇವತೆಯ ತರ್ಪನ್ನೆಗ ಮೋವದೆ ಪುರುಷವ್ರತೋಚಿತಂ ವೀರರಸಂ ವೀರ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ವಿಪುಳತರಕಟಕನುದ್ಯದ್ ದ್ವಿಪಹರಿಮಹಿಷೀನಿಷೇವ್ಯನುನ್ನತಪಾದಂ ವ್ಯುಪನೀತಶ್ರೀಫಲದಂ ವಿಪರೀತಕನಪ್ಪನಂತು ಭೂಭೃನ್ನಾಥಂ
--------------
ಶ್ರೀವಿಜಯ
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ
--------------
ಶ್ರೀವಿಜಯ
ಶ್ರೀ ತಳ್ತುರದೊಳ್ ಕೌಸ್ತುಭ ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ ಪ್ರೀತಿಯಿನಾವನನಗಲಳ್ ನೀತಿನಿರಂತರನುದಾರನಾ ನೃಪತುಂಗಂ
--------------
ಶ್ರೀವಿಜಯ
ಶ್ರೀ ವಿದಿತಾರ್ಥಾಲಂಕಾ ರಾವಳಿಯಂ ವಿವಿಧಭೇದ ವಿಭವಾಸ್ಪದಮಂ ಭಾವಿಸಿ ಬೆಸಸಿದನಖಿಳ ಧ ರಾವಲ್ಲಭನಿಂತಮೋಘವರ್ಷ ನೃಪೇಂದ್ರಂ
--------------
ಶ್ರೀವಿಜಯ
ಶ್ರೀ ವಿಶದವರ್ಣೆ ಮಧುರಾ ರಾವೋಚಿತೆ ಚತುರರುಚಿರ ಪದರಚನೆ ಚಿರಂ ದೇವಿ ಸರಸ್ವತಿ ಹಂಸೀ ಭಾವದೆ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್
--------------
ಶ್ರೀವಿಜಯ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ
--------------
ಶ್ರೀವಿಜಯ
ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೊಳ್ ಕೊಡಿ ಚಿ ತ್ರಕರಂಬೋಲ್ ಪರಭಾಗಭಾವವಿಲಸದ್ವರ್ಣಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ ಮಾೞ್ಕಿಯಿಂ
--------------
ಶ್ರೀವಿಜಯ
ಸರಸಿರುಹಮಿಂದುದೀಧಿತಿ ಪರಾಜಿತಶ್ರೀವಿಲಾಸಮೀ ನಿನ್ನ ಮುಖಂ ಹರಿಣಧರವಿಜಯಶೋಭಾ ಕರಮೆಂಬುದಿದೂರ್ಜಿತೋಪಮಾನ ವಿಭಾಗಂ ಊರ್ಜಿತೋಪಮೆ
--------------
ಶ್ರೀವಿಜಯ