ಒಟ್ಟು 46 ಕಡೆಗಳಲ್ಲಿ , 1 ಕವಿಗಳು , 43 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನಮೆರಡನೆಯದಱೊಳಮಾ ಱನೆಯ ವಿಭಕ್ತಿಯೊಳಮೊಳವು ಗುರುಲಘುಭೇದಂ ಅನಿಯತ ವೃತ್ತಿಯನಱಿದಿದ ನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿಪುಣಂ
--------------
ಶ್ರೀವಿಜಯ
ಚಾರು ಶ್ರೀ ನೃಪತುಂಗ ವಿ ಚಾರ ಕ್ರಮ ಮಾರ್ಗಗಣನೆಯೊಳ್ ಪರಮಾಲಂ ಕಾರವಿಭಾಗಂ ವಿವಿಧಾ ಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ
--------------
ಶ್ರೀವಿಜಯ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ದಿವಸಕರನುದಯಗಿರಿಶಿಖ ರವಿಶೇಷ ವಿಭೂಷಣಂ ತಮೋರಿಪುಬಳಮಂ ಪ್ರವಿಲೀನಂ ಮಾಡಿದನವ ಯವದೊಳ್ ತಾರಾವಿತಾನತೇಜಮನೞಿದಂ ದ್ರವ್ಯಾನುಗತ ಆದಿದೀಪಕಂ
--------------
ಶ್ರೀವಿಜಯ
ನರಪತಿ ಬಂದನಾ ನೃಪನನೞ್ತಿಯೆ ಕಾಣ್ಬುದು ತನ್ನರೇಂದ್ರನಿಂ ಧರಣಿ ಸನಾಥೆ ಭೂಪತಿಗೆ ಕಪ್ಪವನಿತ್ತವನೀಶನತ್ತಣಿಂ ಪರಿಭವಮಂ ಕೞಲ್ಚುವುದಧೀಶ್ವರನಾ ದಯೆಸಾಲ್ಗುಮಾ ಮಹೀ ಶ್ವರನೊಳಿದಪ್ಪುದೆಂಬುದಿದು ಕಾರಕಯುಕ್ತ ವಿಭಕ್ತ್ಯನುಕ್ರಮಂ
--------------
ಶ್ರೀವಿಜಯ
ನರಪತಿಯಂ ಕಪಿಪೃತನಾ ಪರಿವೃತನಂ ಜಳಧಿತಟದೊಳಣುವಂ ಕಂಡಂ ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ
--------------
ಶ್ರೀವಿಜಯ
ನಾನಾ ವಸ್ತುವಿಭೇದಮ ನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ ಮಾನಿತ ಸದಳಂಕಾರಮ ನೂನ ವಿಕಲ್ಪಪ್ರಪಂಚಮೀ ತೆಱನದಱಾ
--------------
ಶ್ರೀವಿಜಯ
ನಿಕ್ಕುವಮಿಂತುಮಲ್ಲದದ (ಱಾ)ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ ಯ್ತಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ
--------------
ಶ್ರೀವಿಜಯ
ನಿಗದಿತ ಯಾಥಾಸಂಖ್ಯಾ ನುಗತವ್ಯತಿರೇಕಯುಗಳ ಲಕ್ಷ್ಯಮಿವಕ್ಕುಂ ಬಗೆಗಾ ದೀಪಕದ ವಿಭಾ ಗ ಗತಿಯನೀ ಭೇದಲಕ್ಷ್ಯಲಕ್ಷಣಯುಗದಿಂ
--------------
ಶ್ರೀವಿಜಯ
ನುತಪರಿವೃತ್ತಿ ವ್ಯಾಜ ಸ್ತುತಿ ಹೇತು ವಿಭಾವನಾ ಲವೋದಾತ್ತಾಪ ಹ್ನುತಿ ರಸವದೂರ್ಜಿತ ವ್ಯಾ ವೃತಿ ಪ್ರಿಯತರಾಶಿಗಳ್ ಕ್ರಮಾದ್ಯುಕ್ತಂಗಳ್
--------------
ಶ್ರೀವಿಜಯ
ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ ನರಪತಿಯಂ ಕಪಿಪೃತನಾ ಪರಿವೃತನಂ ಜಲಧಿತಟದೊಳಣುವಂ ಕಂಡಂ
--------------
ಶ್ರೀವಿಜಯ
ಪರಿಚಿತಸನಾಭಿರಾಗಾಂ ಕುರಜಲಸೇಚಂ ವಿರೋಧಿತರುದವದಹನಂ ಪರಮೋದಯರವಿಗಗನಂ ಪರಾಕ್ರಮವದೆನೆ ವಿಭಿನ್ನರೂಪಕಮಕ್ಕುಂ ವಿಭಿನ್ನರೂಪಕಂ
--------------
ಶ್ರೀವಿಜಯ
ಪಲವುಮನೊಡಗೂಡಿರೆ ಸ ಯ್ತಲಸದೆ ಪೇಱ್ವೆಡೆಯೊಳಂ ಸ್ವಪಾದಾಂತದೊಳಂ ಪಲವಾಱನೆಯ ವಿಭಕ್ತಿಯೊ ಳಲಘೂಚ್ಛಾರಣೆ ಯಥೇಷ್ಟಮುೞಿದೆಡೆಗಳೊಳಂ
--------------
ಶ್ರೀವಿಜಯ
ಪ್ರಸ್ತುತಮಲ್ಲದುದನೆ ಮಿಗೆ ವಿಸ್ತಾರಿಸಿ ನೆಗೞಿ ಪೇೞ್ದೊಡಕ್ಕುಂ ಮತ್ತ ಪ್ರಸ್ತುತಮೆಂಬುದಳಂಕೃತಿ ವಿಸ್ತರಮಿಂತಕ್ಕುಮದಱ ಲಕ್ಷ್ಯವಿಭಾಗಂ
--------------
ಶ್ರೀವಿಜಯ