ಒಟ್ಟು 151 ಕಡೆಗಳಲ್ಲಿ , 1 ಕವಿಗಳು , 117 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅೞಿಪಿದವರುಂ ವಿಭೀತರು ಮೞಲ್ದರುಂ ಸಲೆ ವಿಯೋಗದಿಂ ನಿಜ ಜನದಿಂ ಕೞಿಯೆ ಪರಾರ್ಥಿಗಳುಂ ಬಾ ಯೞಿದೊಳ್ದಿಂತಿದನೆ ಯುಕ್ತಪುನರುಕ್ತಿಕಮಂ
--------------
ಶ್ರೀವಿಜಯ
ಆದಿಸ್ವರಪದಮಂತದೊ ಳಾದೆಡೆಯೊಳ್ ದೀರ್ಘಮಕ್ಕುಮೆರಡನೆಯ ವಿಭ ಕ್ತ್ಯಾದಾನಪದಂ ದೀರ್ಘಂ ಪಾದಂತದೊಳುೞಿದ ತಾಣದೊಳ್ ಸ್ವಚ್ಛಂದಂ
--------------
ಶ್ರೀವಿಜಯ
ಆಯುಂ ಶ್ರೀಯುಂ ವಿಜಯಮು ಮಾಯತಿಯುಂ ನೃಪತಿ ನಿನಗೆ ನಿಜಸಂತತಿಯುಂ ನ್ಯಾಯದೆ ಪೆರ್ಚುವುದಕ್ಕೀ ತೋಯಧಿಧರಣೀಧರಾಧರಸ್ಥಿತಿವರೆಗಂ
--------------
ಶ್ರೀವಿಜಯ
ಆರುಮೀ ಗುರುಲಘೂದಿತದೋಷ ವಿಶೇಷಮಂ ಧೀರಸತ್ವರಱೆದುಂ ಕುಱೆಗೊಂಡು ವಿಭಾಗಿಸರ್ ಕಾರಣಾಂತರಮನಂತದಱೊಳ್ ತಱೆಸಂದು ನಿ ರ್ಧಾರಿತ ಕ್ರಮದೆ ಪೇೞ್ವಿನುದಾಹರಣಂಗಳಂ
--------------
ಶ್ರೀವಿಜಯ
ಇಂತು ಮಿಕ್ಕ ವರ್ಣನೆಗಳ್ ಸಂತತಮೊದಾಗಿ ಪೇೞ್ದ ಕಾವ್ಯಂ ಧರೆಯೊಳ್ ಸಂತತಿ ಕೆಡದೆ ನಿಲ್ಕುಮಾಕ ಲ್ಪಾಂತಂಬರಮಮೋಘವರ್ಷಯ ಶಂಬೋಲ್
--------------
ಶ್ರೀವಿಜಯ
ಇಂದುಕಿರಣಂಗಳಿಂದಂ ಚಂದನರಸದಿಂದೆ ಮಾಗಿಯಾ ನೀರಿಂದಂ ನಂದದು ಪರಿತಾಪಾನಳ ನಿಂದಱಿದೆಂ ನಿನ್ನ ಮೆಯ್ಯ ಕಾಮಜ್ವರಮಂ
--------------
ಶ್ರೀವಿಜಯ
ಇದಱ ವಿಪರ್ಯಯ ವಿವಿಧಾ ಸ್ಪದಾಕ್ಷರ ವಿಕಲ್ಪಮಿಂತಿದುತ್ತರ ಮಾರ್ಗಂ ತ್ರಿದಶಾಧೀಶ್ವರಭೂತ್ಯ ತ್ಯುದಾರ ವಿವಿಧಾರ್ಥವಿಭವನೀ ಭೂಪೇಂದ್ರಂ
--------------
ಶ್ರೀವಿಜಯ
ಇದು ದಕ್ಷಿಣಮಾರ್ಗವಿಭೇ ದದ ಮಧುರರಸಪ್ರಯೋಗಮಾಚಾರ್ಯಮನೋ ಮುದಿತವಿತಾನಂ ವಿದಿತಾ ಸ್ವದಮುತ್ತರಮಾರ್ಗವರ್ಗಮಧುರಾಳಾಪಂ
--------------
ಶ್ರೀವಿಜಯ
ಇದು ದಲ್ ವರ್ಗಪ್ರಾಸ ಕ್ಕುದಾಹೃತಂ ಕುರಿತು ಶಷಸ ವರ್ಣತ್ರಯಮುಂ ವಿದಿತ ಪ್ರಾಸವಿವಿಕ್ತಾ ಸ್ಪದದೊಳ್ ನಿಲೆ ಪೇೞ್ದೊಡದು ಸಮೀಪ ಪ್ರಾಸಂ
--------------
ಶ್ರೀವಿಜಯ
ಇದು ದಾಕ್ಷಿಣಾತ್ಯ ಕವಿಮಾ ರ್ಗದುದಾರಮುದೀಚ್ಯರುರು ವಿಶೇಷಣಯುತಮ ಪ್ಪುದನೊಲ್ವರಿಂತು ಹೇಮಾಂ ಗದ ಲೀಲಾಂಬುಜ ವಿಚಿತ್ರ ಚಿತ್ರಾಧಿಕಮಂ
--------------
ಶ್ರೀವಿಜಯ
ಉರುಪಿತ್ತಶೋಕಪಲ್ಲವ ವಿರಚಿತಶಯನೀಯಮೆನ್ನ ಮೆಯ್ಯಂ ಪೀನಂ ಸ್ಫುರದನಲಪ್ರತಿನಿಧಿ ತ ತ್ಸ್ವರೂಪಗುಣಮಕ್ಕುಮೆಂಬುದೆಂದುಂ ಯುಕ್ತಂ ಯುಕ್ತಾರ್ಥಂ
--------------
ಶ್ರೀವಿಜಯ
ಒಳಗಿರ್ದ ವೈರಿಗಳ್ ಮೊ ಕ್ಕಳಮೀಯರ್ ಪೆರ್ಚಲಧಿಕವಿಭವರ್ಕಳುಮಂ ತಳರದೊಡನಿರ್ದು ಬಡಬಾ ನಳನೆಂದುಂ ಪೆರ್ಚಲೀಯದಂತಂಬುಧಿಯಂ
--------------
ಶ್ರೀವಿಜಯ
ಒಸೆಗೆ ಮೇಣ್ ಮುನಿಗೆ ಮೇಣವರೆಲ್ಲರುಮಂತೆ ಬ ಗ್ಗಿಸುಗೆ ಮತ್ತುೞೆ ಯಲಾಗದು ನೆಟ್ಟನೆ ಪೂಣ್ದುದಂ ಪುಸಿವರಾಗಿರದೆ ಮಾನಸರೆಂಬುದನಿಂತೆ ಶಂ ಕಿಸದೆ ನಂಬುವುದು ಮಿಕ್ಕ ವಿಕಲ್ಪದ ದೋಷಮಂ
--------------
ಶ್ರೀವಿಜಯ
ಕರ ಚರಣ ಶರೀರ ಶಿರೋ ದರ ವದನಾದ್ಯವಯವಂಗಳಿವು ತಂತಮ್ಮೊಳ್ ದೊರೆಕೊಂಡೆಡೆಗಳೊಳೊಳವಾ ಗಿರೆಯುಂ ನರರೊರ್ವರೊರ್ವರಂ ಪೋಲದವೋಲ್
--------------
ಶ್ರೀವಿಜಯ
ಕವಿಗಳುಮನಾದಿಲೋಕೋ ದ್ಭವರಪ್ಪುದಱಿಂದನಂತ ಗಣನಾನುಗತಂ ಸವಿಶೇಷೋಕ್ತಿಗಳುಮನಂ ತ ವಿಧಂಗಳನಂತ ಭೇದವದಱಿಂ ಮಾರ್ಗಂ
--------------
ಶ್ರೀವಿಜಯ