ಒಟ್ಟು 72 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಳದಿಯನಭಿಮತಮುಮನೊ ರ್ಬುಳಿಗೂಡೆ ವಿದಗ್ಧೆ ಸುರತಸೇವನಮಂ ಮೊ ಕ್ಕಳಮವರ್ಗೆ ಮಾಡಲೆಂದಾ ಗಳೆ ಪೋಗಲ್ ಬಗೆದು ನುಡಿದಳಿಂತೀ ಮಾತಂ
--------------
ಶ್ರೀವಿಜಯ
ಕೊಂದು ಜಟಾಯುವನಾತಂ ಮುಂದಿಟ್ಟಾ ಜನಕಸುತೆಯನೊಯ್ದಂ ಮತ್ತಾ ಪಂದೆಯನಂತರಮುಖದೊಳ್ ತಂದಿಟ್ಟಂದಲ್ಲದುೞಿಗುಮೇ ರೌದ್ರರಸಂ ರೌದ್ರ
--------------
ಶ್ರೀವಿಜಯ
ಕೊಡೆ ಪೇೞು ನುತಕಾವ್ಯಮನಿಂತಭಿಮಾನಿ ತಾಂ ನಿರ ಗೀಡಿತ ಮಹಾಪುರುಷವ್ರತನಿಶ್ಚಿತಂ ಕೂಡದಂತೆ ಪೆಱರೊಳ್ ಮೆಚ್ಚಿನೊಳೇತೆಱನಪ್ಪೊಡಂ ನೋಡದಂ ಕುಱಿತಾವನನು ಮೇನುಮಂ
--------------
ಶ್ರೀವಿಜಯ
ಘನಸ್ತನಿತಮುಂ ಕೇಕಿಸ್ವನಮುಂ ನೀರಧಾರೆಯುಂ ಮನಂ ಬೆರ್ಚಿರ್ಕುಮಿಂತೆತ್ತಂ ಘನಮಿಂತು ಘನಸ್ತನಿ (ಗೂಢಚತುರ್ಥಂ) ನಿನ್ನಿಂ ನಿಂನ್ನನೆನೆಂನಿನಾ ನಾನಾನನನಂ ನನನಂ ನೀನೆಂನನ್ನಂನನಾನಾ ನಿಂನೆನೆನನನೂನನಂ
--------------
ಶ್ರೀವಿಜಯ
ಜನಮಱಿಯದನ್ನೆಗಂ ಮು ನ್ನಂ ನಯಮಱಿದಱಿಪಲಾರ್ಪೊಡದು ಮಂತ್ರಿಗುಣಂ ಜನವಾದಂ ನೆಗೞಿ ನಗ ಧ್ವನಿವೋಲನುಕರಣವಾರ್ತೆ ಮಂತ್ರಿಯ ಗುಣಮೇ
--------------
ಶ್ರೀವಿಜಯ
ಜಲನಿಧಿಯಂ ಪಾಯ್ದೊರ್ವನೆ ನಿಲಿಕಿ ದಶಾನನನ ಪೊಳಲನಾ ಲಂಕೆಯನಾ ಕುಲಮಿಲ್ಲದಿಱಿದು ನಿಂದಂ ಕಲಿಯಾದಂ ಬಗೆದು ನೋೞ್ಪೋಡದ್ಭುತಮಾದಂ ಅದ್ಭುತ
--------------
ಶ್ರೀವಿಜಯ
ತಲೆಸೂಡಿ ಮುನ್ನೆ ಕಜ್ಜದ ಫಲಮಂ ಬೆಸಗೊಂಡುಮೇವನಲ್ಲಿಂ ಬೞಿಯಂ ತಲೆಯಂ ಕಿರಿಯಿಸಿ ದಿವಸಮ ನಲಸದೆ ಬೆಸಗೊಳ್ವನಂತು ಗಾವಿಲನಕ್ಕುಂ
--------------
ಶ್ರೀವಿಜಯ
ತಿಳಿಗೊಳನಂ ಪೂಗೊಳನನದಂ ನೆಗೞಿ ಮುಳಿದುಕೊಳ್ವ ಬಳಸೆ ನಾನದಂ ನೆ ಗಳೆ ತಾನೆಡೆಮನಂಗಜನೆದಪ್ಪಲಾ ಗಳೆ ನಂಬವನದೊಪ್ಪುವಂ ವನೇಚರಮದಾ (ಶ್ಲೋಕ)
--------------
ಶ್ರೀವಿಜಯ
ತ್ರಿದಶಸುರಲೋಕವಾಸಾ ಸ್ಪದಮಂ ಪೆಱುಗುಂ ಮನುಷ್ಯ ಮನುಜಂ ನಿನ್ನಾ ಪದಚರಣ ಯುಗದ್ವಯಮಂ ಮುದದೞ್ತಿಯೆ ಬಗೆದು ನೆನೆವನನುದಿನಮೆಂದುಂ
--------------
ಶ್ರೀವಿಜಯ
ದಿವಿಜನೋ ಫಣಿನಾಯಕನೋ ಮನೋ ಭವನಿವಂ ಕರಮೊಪ್ಪಿದನೆಂಬುದಂ ಕವಿಗಳಿಟ್ಟ ವಿಶಂಕೆಯ ಪಾೞಿ ಯಂ ತವಿಸಿ ನಿಲ್ಕೆ ಮನೋಹರ ಕಾವ್ಯದೊಳ್
--------------
ಶ್ರೀವಿಜಯ
ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ ನೆನೆವುದಿದನಿಂತು ಕಮಳದೊ ಳನಿಮಿಷಯುಗಮೊಪ್ಪಿ ತೋರ್ಪುದಿಂತಿಮ ಚೋದ್ಯಂ
--------------
ಶ್ರೀವಿಜಯ
ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ ಕಮಳಬಂಧುವೊಳ್ ದಿನಕರನೊಳ್ ಕಡುಗಾಯ್ಪೆನೆ ಸರಸಿಜಮಂ ಕಿಡಿಸಲ್ ತಾಂ ಪೊಕ್ಕುದಾಗ ಬಗೆದಾಕೊಳನಂ
--------------
ಶ್ರೀವಿಜಯ
ನರಪತಿ ಬಂದನಾ ನೃಪನನೞ್ತಿಯೆ ಕಾಣ್ಬುದು ತನ್ನರೇಂದ್ರನಿಂ ಧರಣಿ ಸನಾಥೆ ಭೂಪತಿಗೆ ಕಪ್ಪವನಿತ್ತವನೀಶನತ್ತಣಿಂ ಪರಿಭವಮಂ ಕೞಲ್ಚುವುದಧೀಶ್ವರನಾ ದಯೆಸಾಲ್ಗುಮಾ ಮಹೀ ಶ್ವರನೊಳಿದಪ್ಪುದೆಂಬುದಿದು ಕಾರಕಯುಕ್ತ ವಿಭಕ್ತ್ಯನುಕ್ರಮಂ
--------------
ಶ್ರೀವಿಜಯ
ನುತಪರಿವೃತ್ತಿ ವ್ಯಾಜ ಸ್ತುತಿ ಹೇತು ವಿಭಾವನಾ ಲವೋದಾತ್ತಾಪ ಹ್ನುತಿ ರಸವದೂರ್ಜಿತ ವ್ಯಾ ವೃತಿ ಪ್ರಿಯತರಾಶಿಗಳ್ ಕ್ರಮಾದ್ಯುಕ್ತಂಗಳ್
--------------
ಶ್ರೀವಿಜಯ
ನೆನೆನೆನೆದು ಪೆಱರ ಮಾತುಗ ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ ಧ್ವನಿಯವೊಲನರ್ಥವಚನಂ ತನಗಾಗಿಸಲಱೆ ಯನುಚಿತ ವಾಕ್ಚತುರತೆಯಂ
--------------
ಶ್ರೀವಿಜಯ