ಒಟ್ಟು 35 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವದನಾಂಬುಜರಂಗದೊಳೀ ಮದಾಲಸಭ್ರೂಲತಾವಿಲಾಸಿನಿ ಲೀಲಾ ಸ್ಪದ ನೃತ್ಯಮನಾಗಿಸಿದ ಪ್ಪುದಿದೆಂಬುದು ರೂಪಕೋರುರೂಪಕಮಕ್ಕುಂ ರೂಪಕ ರೂಪಕಂ
--------------
ಶ್ರೀವಿಜಯ
ವರ ರೂಪಕ ಭೇದಮನಿಂ ತಿರೆ ಪೇೞ್ದೆಂ ಕಿಱೆದನುಱೆದುದಂ ಲಕ್ಷ್ಯದೊಳಾ ದರದಱಗೆ ತೋರ್ಪೆನರ್ಥಾಂ ತರವಿನ್ಯಾಸಕ್ಕೆ ಲಕ್ಷ್ಯಲಕ್ಷಣ ಯುಗಮಂ ಅರ್ಥಾಂತರನ್ಯಾಸ
--------------
ಶ್ರೀವಿಜಯ
ವರಜಾತಿ ರೂಪಕಾರ್ಥಾಂ ತರವಿನ್ಯಾಸಾತಿರೇಕ ಯಾಥಾಸಂಖ್ಯಾ ಸ್ಥಿರದೀಪಕೋಪಮಾ ಬಂ ಧುರಾತಿಶಯ ಸದೃಶಯೋಗಿತಾಕ್ಷೇಪಂಗಳ್
--------------
ಶ್ರೀವಿಜಯ
ವರರೂಪಕಾದ್ಯಳಂಕಾ ರರಚನೆಯೊಳ್ ಮುನ್ನೆ ಪೇೞ್ದು ಬಂದೆಂ ಕೆಲವಂ ದೊರೆಕೊಳೆ ಬಗೆಗೀ ತೆಱದಿಂ ನಿರಂತರವಿರುದ್ಧನಿಯಮಿತ ಶ್ಲೇಷಗಳಂ
--------------
ಶ್ರೀವಿಜಯ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ
--------------
ಶ್ರೀವಿಜಯ
ಸ್ಮಿತಕುಸುಮಮಧರಪಲ್ಲವ ಮತಿಶಯನಯನಾಳಿ ಬಾಹುಶಾಖಂ ಕಾಂತಾಂ ಲತೆಯೆಂದಿಂತು ಸಮಸ್ತಾ ಶ್ರಿತಂ ಸಮಸ್ತಂ ಸಮಸ್ತರೂಪಕಮಕ್ಕುಂ ಸಮಸ್ತರೂಪಕಂ
--------------
ಶ್ರೀವಿಜಯ