ಒಟ್ಟು 58 ಕಡೆಗಳಲ್ಲಿ , 1 ಕವಿಗಳು , 53 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿಗಳುಮನಾದಿಲೋಕೋ ದ್ಭವರಪ್ಪುದಱಿಂದನಂತ ಗಣನಾನುಗತಂ ಸವಿಶೇಷೋಕ್ತಿಗಳುಮನಂ ತ ವಿಧಂಗಳನಂತ ಭೇದವದಱಿಂ ಮಾರ್ಗಂ
--------------
ಶ್ರೀವಿಜಯ
ಕವಿಭಾವಕೃತಾನೇಕ ಪ್ರವಿಭಾಗ ವಿವಿಕ್ತ ಸೂಕ್ತಮಾರ್ಗಂ ಕಾವ್ಯಂ ಸವಿಶೇಷ ಶಬ್ದರಚನಂ ವಿವಿಧಾರ್ಥವ್ಯಕ್ತಿ ವರ್ತಿತಾಲಂಕಾರಂ
--------------
ಶ್ರೀವಿಜಯ
ಕಾರಣಮಾಗಿರ್ಪುದಳಂ ಕಾರಮ ಹೇತೂಕ್ತಿಯೆಂಬುದದು ತಾಂ ನಾನಾ ಕಾರಂ ಜ್ಞಾಪಕ ಸದಳಂ ಕಾರಸುಮಾರ್ಗ ಪ್ರಯೋಗಮೀ ತೆಱನದಱಾ
--------------
ಶ್ರೀವಿಜಯ
ಕ್ಷಿತಿಪತಿಯಂ ಬರಿಸಿ ಜಗ ನ್ನುತನಂ ಸಂತೈಸಿ ಕುಶಲವಾರ್ತಾಂತರಮಂ ಮಿತವಚನಂ ಬೆಸಗೊಂಡತಿ ವಿತೀರ್ಣಮುದನಾದನಾತನೆಂಬುದು ಮಾರ್ಗಂ
--------------
ಶ್ರೀವಿಜಯ
ಗೋಪಾಳ ಬಾಳ ಲಲನಾ ಚಾಪಳ ವಾಚಾಳ ಕಿತವ ಬಾಹ್ಲೀಕಾದಿ ವ್ಯಾಪಾರಂಗಳ್ ಗ್ರಾಮ್ಯಾ ಳಾಪಂಗಳ್ ಮಾರ್ಗಯುಗಳ ಪರಿಹಾರ್ಯಂಗಳ್
--------------
ಶ್ರೀವಿಜಯ
ಘನಮೆರಡನೆಯದಱೊಳಮಾ ಱನೆಯ ವಿಭಕ್ತಿಯೊಳಮೊಳವು ಗುರುಲಘುಭೇದಂ ಅನಿಯತ ವೃತ್ತಿಯನಱಿದಿದ ನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿಪುಣಂ
--------------
ಶ್ರೀವಿಜಯ
ಚಾರು ಶ್ರೀ ನೃಪತುಂಗ ವಿ ಚಾರ ಕ್ರಮ ಮಾರ್ಗಗಣನೆಯೊಳ್ ಪರಮಾಲಂ ಕಾರವಿಭಾಗಂ ವಿವಿಧಾ ಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ
--------------
ಶ್ರೀವಿಜಯ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
--------------
ಶ್ರೀವಿಜಯ
ದೊರೆಕೊಳ್ವಂತಿರೆ ಮುನ್ನಂ ವಿರೋಧಿಗತಮಾರ್ಗಭೇದಮಂ ತೋಱಿದೆನಾ ದರದಿನುಪಮಾದಿಗಳೊಳಂ ನಿರುತಮನುಕ್ತಮುಮನಱಿಗೆ ಲಕ್ಷ್ಯಾಂತರದೊಳ್
--------------
ಶ್ರೀವಿಜಯ
ಧವಳ ಜಳಧರ ಕುಳಾಕುಳ ಮವಿಕಳಮಂಬರತಲಂ ವಿನೀಳಚ್ಛಾಯಂ ಕುವಳಯಕೀರ್ತಿಗೆ ಶಾರದ ಮವಧಾರಿತಮಾಯ್ತದೆಂಬುದುತ್ತರಮಾರ್ಗಂ
--------------
ಶ್ರೀವಿಜಯ
ನಿಕ್ಕುವಮಿಂತು ಮಾರ್ಗಯುಗದೊಳ್ ತಕ್ಕುದನಱೆಯೆ ಪೇೞ್ದೆನಿನಿಸೊಂದುದ್ದೇಶಮಂ ಮಿಕ್ಕ ಗುಣೋದಯರ್ ಕಳೆಯದೆಂತು ಸ ಯ್ತಕ್ಕುಮಂತಾಗೆ ಬಗೆದು ಪೇೞ್ಗೆ ಕಬ್ಬದೊಳ್ (ಶ್ಲೋಕ)
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನೋಡುವೆನಾ ಮಹೀಪತಿಯ ನರ್ಥಿಗಣಾರ್ಥಿತ ಕಲ್ಪವೃಕ್ಷನಂ ಬೇಡುವೆನರ್ಥ ಸಂಚಯಮನೆಂಬುದಿದುತ್ತರ ಮಾರ್ಗವಾಚಕಂ ನೀಡುಮುದಾತ್ತಚಾರುಗುಣನಂ ಮನದೊಳ್ ನೆಱೆನೋೞ್ಪಿನೞ್ತಿಯೊಳ್ ಕೂಡಿರವೇೞ್ಪುನೆಂಬುದಿದು ದಕ್ಷಿಣಮಾರ್ಗವಿಚಕ್ಷಣೋದಿತಂ
--------------
ಶ್ರೀವಿಜಯ
ಪದನಱೆದೊಂದಂ ಕ್ರಿಯೆಯೊಳ್ ಪುದಿದುೞಿದುದನೊಂದಿ ಬರೆ ವಿಶೇಷ್ಯದೊಳೊಂದಂ ಸದಭಿಮತಮಾಗಿ ನಿಲೆ ಪೇ ೞ್ವುದು ಮಾರ್ಗಂ ನಿತ್ಯಮಲ್ಲವಲ್ಲಭಮತದಿಂ
--------------
ಶ್ರೀವಿಜಯ
ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್ ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗಯುಗ್ಮದೊಳ್ ನಿರತಿಶಯಾನುಭಾವಭವನಪ್ಪ ಮಹಾನೃಪತುಂಗ ದೇವನಾ ದರದೊಳೆ ಪೇೞ್ದ ಮಾರ್ಗಗತಿಯಿಂ ತಱೆಸಲ್ಗಿದನಿಂತೆ ಕಬ್ಬಿಗರ್
--------------
ಶ್ರೀವಿಜಯ