ಒಟ್ಟು 220 ಕಡೆಗಳಲ್ಲಿ , 1 ಕವಿಗಳು , 165 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲರಂಬು ಕರ್ಬುವಿಲ್ ಕೋ ಮಲ ಸರಸಿಜನಾಳತಂತುತಿರು ಮತ್ತಿವಱಿ ಬಲದಿನಗಲ್ದರನೆಚ್ಚಾ ತ್ರಿಲೋಕಮಂ ಕಂತು ಬಸಕೆ ಬರಿಸುವನೆಂತುಂ
--------------
ಶ್ರೀವಿಜಯ
ಅಳಕಾನನ ನಯನಂಗಳಿ ನಳಿನಳಿನೋತ್ಪಲವಿಳಾಸಮಂ ಗೆಲ್ದುದಱಿಂ ಕಳಹಂಸಲೀಲಗಮನೇ ಕೊಳನಂ ನೀಂ ಪೋಲ್ವೆಯೆಂಬುದನುಗತಮಕ್ಕುಂ ಅನುಗತ ಯಾಥಾಸಂಖ್ಯ
--------------
ಶ್ರೀವಿಜಯ
ಅಳಕಾನನ ನಯನಂಗಳೊ ಳಳಿನಳಿನೋತ್ಪಳವಿಕಾಶಮಂ ಗೆಲ್ದುದಱೆಂ ತಿಳಿಗೊಳನಂ ಪೋಲ್ತಿರ್ದುಂ ತಿಳಿಯದಿದೇನೆಂಬುದುಂ ತದನ್ವಯಮದಱೊಳ್
--------------
ಶ್ರೀವಿಜಯ
ಅವಗುಣಮಿನಿತಾದೊಡಮಾ ಕವಿತಾಬಂಧಮನಶೇಷಮಂ ದೂಷಿಸುಗುಂ ಸವಿಳಾಸಲೋಲಲೋಚನ ವಿವರಮನೆಡೆವೆತ್ತ ಕಸದವೋಲನವರತಂ
--------------
ಶ್ರೀವಿಜಯ
ಅೞಿದೞಿಪಿ ಬೞಿ ಯನುೞಿಯದೆ ಪೞಿವರುಮಂ ತವಿಸಿ ಕೞಿಯದುೞಿ ವೞಿನಾದಂ ಪೞಿಕೆಯ್ದು ತೊೞ್ತುನುೞಿದಂ ತುೞಿದ ಮಹಾಪುರುಷರಱಿಯದುೞಿದರೆ ಸಿರಿಯಂ
--------------
ಶ್ರೀವಿಜಯ
ಅೞಿಪಿದವರುಂ ವಿಭೀತರು ಮೞಲ್ದರುಂ ಸಲೆ ವಿಯೋಗದಿಂ ನಿಜ ಜನದಿಂ ಕೞಿಯೆ ಪರಾರ್ಥಿಗಳುಂ ಬಾ ಯೞಿದೊಳ್ದಿಂತಿದನೆ ಯುಕ್ತಪುನರುಕ್ತಿಕಮಂ
--------------
ಶ್ರೀವಿಜಯ
ಆಗಳುಂ ಗುರುಗಳಲ್ಲದ ತಾಣದೊಳಂ ಗುರೂ ದ್ಯೋಗದಿಂ ಬಗೆಗೆ ಗೌರವ ದೋಷಮಿದೆಂಬುದಂ ಬೇಗಮಾ ಲಘುಗಳಲ್ಲದ ತಾಣದೊಳಂ ಲಘೂ ಪಾಗಮ ಕ್ರಮದೆ ನಂಬುಗೆ ಲಾಘವ ದೋಷಮಂ
--------------
ಶ್ರೀವಿಜಯ
ಆದಿಸ್ವರಪದಮಂತದೊ ಳಾದೆಡೆಯೊಳ್ ದೀರ್ಘಮಕ್ಕುಮೆರಡನೆಯ ವಿಭ ಕ್ತ್ಯಾದಾನಪದಂ ದೀರ್ಘಂ ಪಾದಂತದೊಳುೞಿದ ತಾಣದೊಳ್ ಸ್ವಚ್ಛಂದಂ
--------------
ಶ್ರೀವಿಜಯ
ಆಮೀಳನಮಂ ಕಣ್ಗಳೊ ಳಾ ಮನದೊಳಗೊಸಗೆಯಂ ಶರೀರದೊಳೆತ್ತಂ ರೋಮಾಂಚಕಂಚುವಂ ಮದಿ ರಾಮದವಾಗಿಸೆ ತೆಗೞ್ಪನಾಕೆಯ ನುಡಿಯೊಳ್ ಗುಣಸ್ವಭಾವಾಖ್ಯಾನಂ
--------------
ಶ್ರೀವಿಜಯ
ಆರುಮೀ ಗುರುಲಘೂದಿತದೋಷ ವಿಶೇಷಮಂ ಧೀರಸತ್ವರಱೆದುಂ ಕುಱೆಗೊಂಡು ವಿಭಾಗಿಸರ್ ಕಾರಣಾಂತರಮನಂತದಱೊಳ್ ತಱೆಸಂದು ನಿ ರ್ಧಾರಿತ ಕ್ರಮದೆ ಪೇೞ್ವಿನುದಾಹರಣಂಗಳಂ
--------------
ಶ್ರೀವಿಜಯ
ಆರೆಮುಚ್ಚಿ ಕಣ್ಗಲಮ ವನ ಕರಿ ಮೆಲ್ಲದೆ ಲಲಿತ ಸಲ್ಲಕೀಪಲ್ಲವಮಂ ಸ್ಮರವಶದಿಂದಿರ್ದುದು ನಿಜ ಕರೇಣುಪೇಚಕನಿರೂಪಿತಾಯತಹಸ್ತಂ ಕ್ರಿಯಾಸ್ವಭಾವಾಖ್ಯಾನಂ
--------------
ಶ್ರೀವಿಜಯ
ಆಶಾವಳಯಿತಲೋಕಾ ಕಾಶಮಿದೇನತಿವಿಶಾಲಮೋ ನಿನ್ನ ಯಶೋ ರಾಶಿಯನಿಂದುದ್ಯುತಿಯ ನಿ ಕಾಶಮನೊಳಕೊಳ್ಗುಮಳವಿಗೞಿ ದಿರ್ದುದುಮಂ
--------------
ಶ್ರೀವಿಜಯ
ಇಂತಿರೆ ಮಾರ್ಗದ್ವಿತಯುಗ ತಾಂತರಮಂ ಪೇೞ್ದೆನೆಲ್ಲಿಯುಂ ಕ್ಷೀರಗುಡಾ ದ್ಯಂತರರಸಾಂತರಂ ಜಾ ತ್ಯಂತರಮಪ್ಪಂತನಂತಮಂತರ್ಭೇದಂ (ಗೀತಿಕೆ)
--------------
ಶ್ರೀವಿಜಯ
ಇಂತು ಪೇಳ್ದೊಡಿದು ಗೌರವದೋಷದ ಮಾೞ್ಕಿನಿ ಶ್ಚಿಂತಮೀ ತೆಱದವಂ ಕಳೆಗಾ ಕೃತಿಯತ್ತಣಿಂ ಮುಂತೆ ಪೇೞ್ವಿ ಕುಱೆಪಂ ಕುಱೆಗೊಂಡು ಕವೀಶರಾ ರ್ಪಂತು ಪಿಂಗಿಸುಗೆ ಕಾವ್ಯದಿನಾ ಲಘುದೋಷಮಂ
--------------
ಶ್ರೀವಿಜಯ
ಇಂತು ವಿಶೇಷ್ಯಂ ಕ್ರಿಯೆಯಂ ಸಂತಂ ನೋೞ್ಪುದಱೆುನಕ್ಕುಮದು ಸಾಪೇಕ್ಷಂ ಚಿಂತಿಸೆ ಸಮಾಸಮಂ ಪೇ ೞ್ಪಂತಪ್ಪ ಪದಂ ಸಮರ್ಥಮಲ್ತಪ್ಪುದಱೆಂ
--------------
ಶ್ರೀವಿಜಯ