ಒಟ್ಟು 84 ಕಡೆಗಳಲ್ಲಿ , 1 ಕವಿಗಳು , 70 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯವಿಲೀನವಿಶದ ವಿಷಯ ವಿಶೇಷಂ
--------------
ಶ್ರೀವಿಜಯ
ಗುಣದೊಳಮಱಿ ಪುವುದಿನಿಸವ ಗುಣಮಂ ದೋಷದೊಳಮಿನಿಸು ಗುಣಮಂ ತಂದಿ ರ್ದೆಣಿಸುವುದು ಲೇಶಮೆಂಬುದು ಗಣಿದದಿನಿಂತಕ್ಕುಮದಱ ಲಕ್ಷ್ಯವಿಭಾಗಂ
--------------
ಶ್ರೀವಿಜಯ
ಗುನಜಾತ್ಯಾದಿಗಳೊಳಗನು ಗುಣಮಾಗಿರೆ ಪೇೞದವಱ ವಿಕಳತೆಯಂ ಸ ಯ್ತೆಣಿಸಿ ವಿಶೇಷಮನಱಿ ಪುವ ಗಣನೆ ವಿಶೇಷಾನುಭಾವ ಸದಳಂಕಾರಂ
--------------
ಶ್ರೀವಿಜಯ
ಗುರುಜನದ ಪರಕೆಯುಂ ಬಂ ಧುರ ಪುಣ್ಯಫಳಾನುಬಂಧಮುಂ ನೆರೆದೆನ್ನೊಳ್ ಪರಮಾನುಭಾವಭರಮುಂ ದೊರೆಕೊಂಡುವವಿದು ಬರವಿನೊಳ್ ನಿಮ್ಮಡಿಯಾ
--------------
ಶ್ರೀವಿಜಯ
ಚಾರು ಶ್ರೀ ನೃಪತುಂಗ ವಿ ಚಾರ ಕ್ರಮ ಮಾರ್ಗಗಣನೆಯೊಳ್ ಪರಮಾಲಂ ಕಾರವಿಭಾಗಂ ವಿವಿಧಾ ಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ
--------------
ಶ್ರೀವಿಜಯ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ತಳಮಿತಮಧ್ಯೆಯನಾಯತ ವಿಳೋಳಲೋಚನೆಯನುನ್ನತಸ್ತನಯುಗೆಯಂ ಲಳಿತವಿಲಾಸಿನಿಯಂ ಕೋ ಮಳಾಂಗಿಯಂ ಪೃಥುನಿತಂಬಬಿಂಬೆಯನುೞಿದಂ ದ್ರವ್ಯಸ್ವಭಾವಾಖ್ಯಾನಂ
--------------
ಶ್ರೀವಿಜಯ
ತಿರಿತರ್ಕುಮಮಳ ಜಳನಿಧಿ ಪರಿಖಾವೃತಭೂಮಿಭಾಗಮಂ ಭರದೆ ಜಳಾ ಕರವಿಕ್ಷೇಪಕ ಕಕುದಂ ತರಮಂ ಸವಿಶೇಷರುಚಿರ ಸಂಭವ ನಿಧಿಯಂ ಕ್ರಿಯಾನುಗತ ಆದಿದೀಪಕಂ
--------------
ಶ್ರೀವಿಜಯ
ತ್ಯಾಗಾದಿಗುಣಗಣೋದಯ ಭಾಗಿಯನೇನಾನುಮೊಂದುಪಾಯಾಂತರದಿಂ ನೀಗಲ್ ನೆಱಿಯದೆಯನುಪಮ ನೀ ಗಣಿದದಿನಾನೆ ಮಾಡಿ ನುಡಿದಂ ಬಗೆಯಂ
--------------
ಶ್ರೀವಿಜಯ
ದಾರುದಾರುಣನಂ ದಾನವಾರಿವಾರಿತಲೋಕನಂ ಬಾರ ಬಾ ರಣಮಂ ನೋಡಾ ಸಾರಸಾರಾಂಬುದಾಭಮಂ ಸಾರಾಸಾರಸನಾದಾಮಸಾರಸಾರಾ ನಿತಂಬೆಯಂ ತಾರಾತಾರಾತರಂಗಾಭಾಕಾರತಾ ರಮಣೀಯೆಯಂ
--------------
ಶ್ರೀವಿಜಯ
ದೇವರುಂ ಗೊರವರುಂ ಗುಣವೃದ್ಧರನಾರತಂ ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ ಏವಮಂ ಬಗೆಯದಂತಿರೆ ಪೇೞ್ದ ಸಮುಚ್ಚಯೋ ದ್ಭಾವಕಕ್ರಮವಿಚಾರದೆ ದೋಷಮಿದಗ್ಗಳಂ
--------------
ಶ್ರೀವಿಜಯ
ದೋಷಂಗಳಿಂತು ಮಿಗೆ ಸಂ ಶ್ಲೇಷದೊಳಾದಂದು ಸಕಲ ವಿದ್ವತ್ಸಭೆಯೊಳ್ ದೂಷಿಸುಗುಂ ಕೃತಿವಧುವಂ ಭಾಷಾವಿದರದಱ ತೆಱನನುೞಿ ಗೀ ದೆಸೆಯಿಂ
--------------
ಶ್ರೀವಿಜಯ
ದೋಸಮನೆ ಗುಣದವೋಲು ದ್ಭಾಸಿಸಿ ಕನ್ನಡದೊಳೊಲ್ದು ಪೂರ್ವಾಚಾರ್ಯರ್ ದೇಸಿಯನೆ ನಿಱೆಸಿ ಖಂಡ ಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್
--------------
ಶ್ರೀವಿಜಯ
ದೋಸಮಿನಿತೆಂದು ಬಗೆದು ದ್ಭಾಸಿಸಿ ತಱೆಸಂದು ಕನ್ನಡಂಗಳೊಳೆಂದುಂ ವಾಸುಗಿಯುಮಱೆಯಲಾಱದೆ ಬೇಸಱುಗುಂ ದೇಶೀ ಬೇಱಿವೇಱಪ್ಪುದಱಿಂ
--------------
ಶ್ರೀವಿಜಯ