ಒಟ್ಟು 33 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬೆರಸಿರೆ ಮುಂ ಸಂಯೋಗಾ ಕ್ಷರಂಗಳೇಕಸ್ವರಂಗಳಿಂ ಸುಪ್ರಾಸಂ ನೆರೆದು ವಿಪರ್ಯಾಸಕ್ರಮ ಮಿರೆ ಸತತಮ ಶಾಂತಪೂರ್ವಮಕ್ಕುಂ ಪ್ರಾಸಂ
ಮಿಗೆ ದುಷ್ಕರ ಕಾವ್ಯಂಗಳೊ ಳಗರ್ಹಿತಪ್ರಾಯಮಕ್ಕುಮಾಶ್ರುತಿಕಷ್ಟಂ ಪಗರಣದೊಳುಱಿದ ಮೂಱು೦ ನಗಿಸುಗುಮಪ್ಪುದಱಿನಲ್ಲಿಗಂತವದೋಷಂ
ಮಿಗೆ ನಿಬಿಡಬಂಧಮೆಂಬುದು ತಗುಳ್ವುವು ವರ್ಣಂಗಳಗಲದಿರೆ ಮತ್ತಕ್ಕುಂ ನೆಗೞ್ದಲ್ಪಪ್ರಾಣಾಕ್ಷರ ನಿಗದಿತಮೇತದ್ವಿಪರ್ಯಯೋಕ್ತಂ ಶಿಥಿಲಂ
ಲೌಕಿಕ ಸಾಮಯಿಕೋರು ವಿ ವೇಕಮುಮಭ್ಯುದಯ ಪರಮ ನಿಃಶ್ರೇಯಸಮುಂ ಪ್ರಾಕಟಮಕ್ಕುಂ ವಿದಿತಾ ನೇಕ ಕವೀಶ ಪ್ರಯೋಗ ಪದಪದ್ಧತಿಯೊಳ್
ವಿನುತ ಪ್ರಾಸಂ ಶಾಂತೋ ಪನತಂ ವರ್ಗೋದಿತಂ ಸಮೀಪಗತಂ ಮ ತ್ತನುಗತಮಂತಗತಂ ಸಂ ಜನಿತ ವಿಭೇದೋಕ್ತಿಯಿಂದಮಿಂತಾಱು ತೆಱ೦
ಶಾಂತಪ್ರಾಸದ ಭೇದಮ ದಿಂತಕ್ಕುಂ ವರ್ಗದಕ್ಕರಂಗಳ್ ನಾಲ್ಕುಂ ಸಂತಮಿರೆ ಪೇೞ್ದ ತಾಣದೊ ಳಂತಕ್ಕುಂ ಪ್ರಾಕ್ತನೋಕ್ತ ವರ್ಗ ಪ್ರಾಸಂ