ಒಟ್ಟು 21 ಕಡೆಗಳಲ್ಲಿ , 1 ಕವಿಗಳು , 19 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿನುತ ಪ್ರಾಸಂ ಶಾಂತೋ ಪನತಂ ವರ್ಗೋದಿತಂ ಸಮೀಪಗತಂ ಮ ತ್ತನುಗತಮಂತಗತಂ ಸಂ ಜನಿತ ವಿಭೇದೋಕ್ತಿಯಿಂದಮಿಂತಾಱು ತೆಱ೦
--------------
ಶ್ರೀವಿಜಯ
ಶಶಧರಬಿಂಬಾನನೆಯಂ ಝಷಕೇತನ ಕೇತನಾಭತನುತನುವಂ ತಾಂ ಬಿಸವಿಶದ ವರ್ಣೆಯಂ ಕಂ ಡೊಸೆದಂ ಬಸದೊಳಗೆ ಜನಕತನಯಳನಣುವಂ
--------------
ಶ್ರೀವಿಜಯ
ಸಕಲಜನವಿನುತನಂ ಶತ ಮಖ ಸದೃಶ ವಿಶಾಲ ವಿವಿಧ ವಿಭವೋದಯನಂ ಪ್ರಗತ ಗುಣಗಣನನರಿಬಲ ವಿಘಟನನಂ ಕಂಡನಣುವನಾ ರಾಘನಂ
--------------
ಶ್ರೀವಿಜಯ
ಸ್ತುತಿನಿಂದೆಗಳಿಂ ಸವಿವ ಕ್ಷಿತ ಗುಣದೊಳ್ ಸದೃಶಮಾಗಿ ಪೇೞ್ವುದು ಪೆಱತಂ ನುತ ಸದೃಶ್ಯಯೋಗಿತಾಲಂ ಕೃತಿಲಕ್ಷಣಮಕ್ಕುಮಿಂತು ತದುದಾಹರಣಂ
--------------
ಶ್ರೀವಿಜಯ