ಒಟ್ಟು 430 ಕಡೆಗಳಲ್ಲಿ , 1 ಕವಿಗಳು , 285 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ನೆಗಮದಱೊಳಗೆ ಸಮು ತ್ಪನ್ನ ಪ್ರಾಧಾನ್ಯಮನ್ಯಮರ್ಥಾಧಾರಂ ಮುನ್ನಂ ಶಬ್ದಾಳಂಕಾ ರನ್ನಿಶ್ಚಿತಮಕ್ಕೆ ಪೇೞ್ವ ಮಾೞ್ಕಿಯೊಳೆನ್ನಾ
--------------
ಶ್ರೀವಿಜಯ
ಅಪರಾಗಮ ಮುನಿಪತಿವೋ ಲಪಗತಗುಣನಾಗಿಯುಂ ನಿಜಾಯತದೋಷಂ ವಿಪುಳ ಯಶೋಧನಲೋಭಂ ನೃಪವೃಷಭನರಾತಿನಿಕರತರುದವದಹನಂ
--------------
ಶ್ರೀವಿಜಯ
ಅಮದಾಲಸ ಲೋಚನಲೀ ಲಮಪಾಸ್ತಭ್ರೂಲತಾವಿಲಾಸ ವಿಶೇಷಂ ಕಮಲಮದು ಪೋಲದೀ ನಿ ನ್ನ ಮುಖಮನಿಂತೆತ್ತಮುಕ್ತಗುಣಭೂಷಣಮಂ
--------------
ಶ್ರೀವಿಜಯ
ಅಮೃತಭವಂ ಶಿಶಿರಕರಂ ಕಮಳಂ ಜಗದೇಕಪಾವನೀಯ ಶ್ರೀಕಂ ಸಮನವಱೊಳ್ ನಿನ್ನ ಮೊಗಂ ಕ್ರಮದೆಂಬುದನಱಿವುದಾ ಪ್ರಶಂಸೋಪಮೆಯಂ ಪ್ರಶಂಸೋಪಮೆ
--------------
ಶ್ರೀವಿಜಯ
ಅಮೃತಮಯಕಿರಣನೆಂಬುದು ಮಮರದು ಶಿಶಿರಾಂಶುವೆಂಬುದುಂ ಶಶಿಗೆಂದುಂ ಸಮನಿಸಿ ವಿಷಕಿರಣನುಮನ ಲಮರೀಚಿಯುಮೆಂದೆನಲ್ಕೆ ಮೋಹಾಪೋಹಂ ಮೋಹಾಪೋಹಂ
--------------
ಶ್ರೀವಿಜಯ
ಅರಮರಸಂ ಕೃತಕಾದ್ರಿಯೊ ಳರಮರಮನೆಯೊಳಗೆ ಕಂದುಕ ಕ್ರೀಡೆಗಳೊಳ್ ಅರಮುದ್ಯಾನವನಂಗಳೊ ಳರಮಂತಃಪುರದೊಳರಮದೆಂದುಂ ನಿಲ್ವಂ
--------------
ಶ್ರೀವಿಜಯ
ಅರಸರೊಳೆಲೆ ನೀಂ ಸರಸಮ ನರಸಿಯವೋಲಾಡುತಿರ್ಪೆ ನಿನಗಿದು ಗುಣಮೇ ಅರಸರ್ ಸರಸಮನಱಿವರೆ ಸರಸಮನಾಡರಸರಲ್ಲದವರೊಳ್ ಮಗಳೇ
--------------
ಶ್ರೀವಿಜಯ
ಅರಸಿಯ ದಿವ್ಯಸೇ ವಾದರದಿರದೀಗಡೆ ನಿ ನ್ನರಸಿಯನೆಯ್ದುವಿನಂ ಪರಿಜನಮಂ ಕಳಿಪಿಂ (ಕ್ರಿಯಾಗೋಪಕ)
--------------
ಶ್ರೀವಿಜಯ
ಅರಿಗೆ ದುರಾಹವರಂಗಾಂ ತರದೊಳಭೀತಂ ನಿಜಾರಿಸಮಿತಿಗಳಿಂದಂ ನೆರೆದ ಜಯಂಗೊಂಡಾಗಡೆ ಸುರಾಂಗನಾಸುರತವಿಷಯಸುಖಮಂ ಕೊಟ್ಟಂ
--------------
ಶ್ರೀವಿಜಯ
ಅರಿನೃಪಬಲಮಂ ಗೆಲ್ದುರು ಪರಾಕ್ರಮಕ್ರಮದೆ ಶೌರ್ಯಮಂ ಪ್ರಕಟಿಸು ನೀಂ ನರಮಹಿತಾ ನಿನಗೇನಹಿ ತರುಮೊಳರೇ ಸತತ ಪರಹಿತಾಚಾರಪರಾ
--------------
ಶ್ರೀವಿಜಯ
ಅರೂಢನಿಜಮನೋಹಂ ಕಾರೋತ್ಕರ್ಷಪ್ರಕಾಶಮೂರ್ಜಿತ ಸದಳಂ ಕಾರಂ ತದೀಯ ವಸ್ತುವಿ ಚಾರಮನಿ ತೆಱದಿನಱಿದುಕೊಳ್ಗೆ ಕವೀಶರ್
--------------
ಶ್ರೀವಿಜಯ
ಅಱೆದು ಪೀನಂ ಮಾರ್ಗಗತಿಯಂ ತಱೆ [ಸಲಲಾ] ಗದಾರ್ಗಂ ಬಹು ವಿಕಲ್ಪದೊಳ್ ಕುಱೆತು ಪೂರ್ವಶಾಸ್ತ್ರಪದವಿಧಿಯಂ ತೆಱ್ತೆದಿರೆ ಪೇೞ್ವೆನಿನಿಸಂ ಕನ್ನಡದೊಳ್ (ಕಂದ)
--------------
ಶ್ರೀವಿಜಯ
ಅಲಘು ಭುಜನಾಗಿಯುಂ ನಿ ಶ್ಚಲನಾಗಿಯುಮಖಿಳ ಭೂಭೃದುತ್ತುಂಗತೆಯೊಳ್ ನೆಲಸಿಯುಮೆಯ್ದದು ನಿನ್ನಾ ವಿಲಸಿತಮಂ ಮೇರು ಕಠಿನಭೋಗಾಧಾರಂ
--------------
ಶ್ರೀವಿಜಯ
ಅಳಿಗಳಿವು ಕಣ್ಗಳಲ್ಲಿವು ನಳಿನಮಿದೀ ವದನಮಲ್ತು ನಿಜಕಾಮಿನಿಯಾ ತಿಳಿದಿಂತು ಪೇೞೊಡಿದು ಮೊ ಕ್ಕಳಮುಪಮಾಖ್ಯಾತಮಪ್ಪ ತತ್ತ್ವಾಖ್ಯಾನಂ ತತ್ತ್ವಾಖ್ಯಾನೋಪಮೆ
--------------
ಶ್ರೀವಿಜಯ
ಅಳಿನಳಿನೋತ್ಪಳರುಚಿಗಳ ನಳಕಾನನ ನಯನಯುಗಳದಿಂ ಗೆಲ್ದಿರ್ದುಂ ಕೊಳದೊಳಗೇನಂ ನೋೞ್ಪಿಗ ವಿಳಾಸಿನೀ ನಿನ್ನ ವೋಲದೇನತಿಶಯಮೋ
--------------
ಶ್ರೀವಿಜಯ