ಒಟ್ಟು 23 ಕಡೆಗಳಲ್ಲಿ , 1 ಕವಿಗಳು , 20 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶ್ರೀ ವಿಶದವರ್ಣೆ ಮಧುರಾ ರಾವೋಚಿತೆ ಚತುರರುಚಿರ ಪದರಚನೆ ಚಿರಂ ದೇವಿ ಸರಸ್ವತಿ ಹಂಸೀ ಭಾವದೆ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್
ಸಮ ಮಧುರ ನಿಬಿಡ ಕಾಂತ ಸು ಕುಮಾರ ಸುಸಮಾಹಿತ ಪ್ರಸನ್ನೋದಾರ ಪ್ರಮಿತ ಗ್ರಾಮ್ಯೋಜಸ್ವಿ ಕ್ರಮದಿಂ ದಶಭೇದಮಲ್ಲಿ ದಕ್ಷಿಣ ಮಾರ್ಗಂ
ಸವಿವೊಡೆ ಮಧುರರಸಂಬೋಲ್ ಕಿವಿಗಿನಿದಾಗಿರ್ಪ ವಚನವಿರಚನೆ ಮಧುರಂ ಸವಿಳಾಸಾಳಾಪದಿನವ ರ ವಿಶೇಷ ವಿಶೇಷ್ಯಮಿಂತು ಮಾರ್ಗದ್ವಯದೊಳ್
ಸುರಗಿರಿವೋಲ್ ಧೈರ್ಯದಿನಂ ಬರಮಣಿವೋಲ್ ತೇಜದಿಂ ಶಶಾಂಕಂಬೋಲ್ ಬಂ ಧುರ ಕಾಂತಿಗುಣದಿನೆಂದಿಂ ತಿರೆ ಪೇಳ್ವುದನಱಿದುಕೊಳ್ಗೆ ಹೇತೂಪಮೆಯಂ ಹೇತೊಪಮೆ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ