ಒಟ್ಟು 453 ಕಡೆಗಳಲ್ಲಿ , 1 ಕವಿಗಳು , 293 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರವಿಂದೋತ್ಪಲಪುಷ್ಪೋ ತ್ಕರಂಗಳೊಳ್ ಪಾಯ್ಗುಮುದ್ ಭ್ರಮದ್ ಭ್ರಮರಂಗಳ್ ವಿರತಮುದವಾದುವುರುಮದ ವಿರಾಮವನಕರಿಕಪೋಲಫಲಕದೊಳಾಗಳ್
--------------
ಶ್ರೀವಿಜಯ
ಅರಸರೊಳೆಲೆ ನೀಂ ಸರಸಮ ನರಸಿಯವೋಲಾಡುತಿರ್ಪೆ ನಿನಗಿದು ಗುಣಮೇ ಅರಸರ್ ಸರಸಮನಱಿವರೆ ಸರಸಮನಾಡರಸರಲ್ಲದವರೊಳ್ ಮಗಳೇ
--------------
ಶ್ರೀವಿಜಯ
ಅರಸಿಯ ದಿವ್ಯಸೇ ವಾದರದಿರದೀಗಡೆ ನಿ ನ್ನರಸಿಯನೆಯ್ದುವಿನಂ ಪರಿಜನಮಂ ಕಳಿಪಿಂ (ಕ್ರಿಯಾಗೋಪಕ)
--------------
ಶ್ರೀವಿಜಯ
ಅರಿಗೆ ದುರಾಹವರಂಗಾಂ ತರದೊಳಭೀತಂ ನಿಜಾರಿಸಮಿತಿಗಳಿಂದಂ ನೆರೆದ ಜಯಂಗೊಂಡಾಗಡೆ ಸುರಾಂಗನಾಸುರತವಿಷಯಸುಖಮಂ ಕೊಟ್ಟಂ
--------------
ಶ್ರೀವಿಜಯ
ಅರಿನೃಪಬಲಮಂ ಗೆಲ್ದುರು ಪರಾಕ್ರಮಕ್ರಮದೆ ಶೌರ್ಯಮಂ ಪ್ರಕಟಿಸು ನೀಂ ನರಮಹಿತಾ ನಿನಗೇನಹಿ ತರುಮೊಳರೇ ಸತತ ಪರಹಿತಾಚಾರಪರಾ
--------------
ಶ್ರೀವಿಜಯ
ಅರೂಢನಿಜಮನೋಹಂ ಕಾರೋತ್ಕರ್ಷಪ್ರಕಾಶಮೂರ್ಜಿತ ಸದಳಂ ಕಾರಂ ತದೀಯ ವಸ್ತುವಿ ಚಾರಮನಿ ತೆಱದಿನಱಿದುಕೊಳ್ಗೆ ಕವೀಶರ್
--------------
ಶ್ರೀವಿಜಯ
ಅಱಿವುಳ್ಳವರೊಳ್ ಬೆರಸದು ದಱಿ೦ದಮಱಿಯದರೊಳಪ್ಪ ಪರಿಚಯದಿಂದಂ ನೆಱಿಯಿಂದ್ರಿಯಮಂ ಗೆಲ್ಲದು ದಱಿ೦ದಮಕ್ಕುಂ ಜನಕ್ಕೆ ಪೀನಂ ಬೆಸನಂ
--------------
ಶ್ರೀವಿಜಯ
ಅಱೆದು ಪೀನಂ ಮಾರ್ಗಗತಿಯಂ ತಱೆ [ಸಲಲಾ] ಗದಾರ್ಗಂ ಬಹು ವಿಕಲ್ಪದೊಳ್ ಕುಱೆತು ಪೂರ್ವಶಾಸ್ತ್ರಪದವಿಧಿಯಂ ತೆಱ್ತೆದಿರೆ ಪೇೞ್ವೆನಿನಿಸಂ ಕನ್ನಡದೊಳ್ (ಕಂದ)
--------------
ಶ್ರೀವಿಜಯ
ಅಲಘು ಭುಜನಾಗಿಯುಂ ನಿ ಶ್ಚಲನಾಗಿಯುಮಖಿಳ ಭೂಭೃದುತ್ತುಂಗತೆಯೊಳ್ ನೆಲಸಿಯುಮೆಯ್ದದು ನಿನ್ನಾ ವಿಲಸಿತಮಂ ಮೇರು ಕಠಿನಭೋಗಾಧಾರಂ
--------------
ಶ್ರೀವಿಜಯ
ಅಳಕಾನನ ನಯನಂಗಳಿ ನಳಿನಳಿನೋತ್ಪಲವಿಳಾಸಮಂ ಗೆಲ್ದುದಱಿಂ ಕಳಹಂಸಲೀಲಗಮನೇ ಕೊಳನಂ ನೀಂ ಪೋಲ್ವೆಯೆಂಬುದನುಗತಮಕ್ಕುಂ ಅನುಗತ ಯಾಥಾಸಂಖ್ಯ
--------------
ಶ್ರೀವಿಜಯ
ಅಳಕಾನನ ನಯನಂಗಳೊ ಳಳಿನಳಿನೋತ್ಪಳವಿಕಾಶಮಂ ಗೆಲ್ದುದಱೆಂ ತಿಳಿಗೊಳನಂ ಪೋಲ್ತಿರ್ದುಂ ತಿಳಿಯದಿದೇನೆಂಬುದುಂ ತದನ್ವಯಮದಱೊಳ್
--------------
ಶ್ರೀವಿಜಯ
ಅಳಿಗಳಿವು ಕಣ್ಗಳಲ್ಲಿವು ನಳಿನಮಿದೀ ವದನಮಲ್ತು ನಿಜಕಾಮಿನಿಯಾ ತಿಳಿದಿಂತು ಪೇೞೊಡಿದು ಮೊ ಕ್ಕಳಮುಪಮಾಖ್ಯಾತಮಪ್ಪ ತತ್ತ್ವಾಖ್ಯಾನಂ ತತ್ತ್ವಾಖ್ಯಾನೋಪಮೆ
--------------
ಶ್ರೀವಿಜಯ
ಅಳಿನಳಿನೋತ್ಪಳರುಚಿಗಳ ನಳಕಾನನ ನಯನಯುಗಳದಿಂ ಗೆಲ್ದಿರ್ದುಂ ಕೊಳದೊಳಗೇನಂ ನೋೞ್ಪಿಗ ವಿಳಾಸಿನೀ ನಿನ್ನ ವೋಲದೇನತಿಶಯಮೋ
--------------
ಶ್ರೀವಿಜಯ
ಅವಱೊಳ್ ಶರೀರಮೆಂಬುದು ಕವಿಪ್ರಧಾನ ಪ್ರಯೋಗ ಪದಪದ್ಧತಿಯೊಳ್ ದ್ವಿವಿಧಮೆನಿಕ್ಕುಮದತಿಶಯ ಧವಳೋಕ್ತಕ್ರಮದೆ ಗದ್ಯಪದ್ಯಾಖ್ಯಾತಂ
--------------
ಶ್ರೀವಿಜಯ
ಅಹರಹರುಚ್ಚೈರ್ನೀಚೈ ರ್ಮುಹುರ್ಮುಹುರಿತಸ್ತತಃ ಪುನಃಪುನರಂತ ರ್ಬಹಿರಾದಿಹ ಪ್ರಾದುರಹೋ ಸಹಸಾದಿಗಳವ್ಯಯಂಗಳ ಸಹಾಯಂಗಳ್
--------------
ಶ್ರೀವಿಜಯ