ಒಟ್ಟು 67 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೊಂದಱ ಸೌಂದರಮ ನೊದೊಂದೀಕ್ಷಿಸಲೊಡರ್ಚಿ ನಾಸಿಕಮಡ್ಡಂ ಬಂದಂದಮನೀಕ್ಷಿಸಿ ಪೆಱ ನಿಂದಂದೀಕ್ಷಿಸುವುವವಳ ನಿಡಿಯೆಸಳ್ಗಣ್ಗಳ್
--------------
ಶ್ರೀವಿಜಯ
ಕಂದಂಗಳ್ ಫಲವಾಗಿರೆ ಸುಂದರ ವೃತ್ತಂಗಳಕ್ಕರಂ ಚವುಪದಿ ಮ ತ್ತಂ ದಲ್ ಗೀತಿಕೆ ತಿವದಿಗ ಳಂದಂಬೆತ್ತೆಸೆಯೆ ಪೇೞ್ದೊಡದು ಚತ್ತಾಣಂ
--------------
ಶ್ರೀವಿಜಯ
ಕಂದಮುಮಮಳಿನ ವೃತ್ತಮು ಮೊಂದೊಂದೆಡೆಗೊಂ ಡು ಜಾತಿಜಾಣೆಸೆಯ ಬೆಡಂ ಗೊಂದಿವೞೊಳಮರೆ ಪೇೞಲ್ ಸುಂದರ ರೂಪಾ ಬೆದಂಡೆಗಬ್ಬಮದಕ್ಕುಂ
--------------
ಶ್ರೀವಿಜಯ
ಕರ ಚರಣ ಶರೀರ ಶಿರೋ ದರ ವದನಾದ್ಯವಯವಂಗಳಿವು ತಂತಮ್ಮೊಳ್ ದೊರೆಕೊಂಡೆಡೆಗಳೊಳೊಳವಾ ಗಿರೆಯುಂ ನರರೊರ್ವರೊರ್ವರಂ ಪೋಲದವೋಲ್
--------------
ಶ್ರೀವಿಜಯ
ಕವಿಭಾವಕೃತಾನೇಕ ಪ್ರವಿಭಾಗ ವಿವಿಕ್ತ ಸೂಕ್ತಮಾರ್ಗಂ ಕಾವ್ಯಂ ಸವಿಶೇಷ ಶಬ್ದರಚನಂ ವಿವಿಧಾರ್ಥವ್ಯಕ್ತಿ ವರ್ತಿತಾಲಂಕಾರಂ
--------------
ಶ್ರೀವಿಜಯ
ಗುಣದೋಷಾದಿಗಳಿಂದನು ಗುಣಮಾಗಿರೆ ಪೇೞ್ದು ತದನುಸದೃಶದಿನೊಂದಂ ಪ್ರಣಿಹಿತ ನಿದರ್ಶನಕ್ರಮ ದೆಣಿಸುವುದಕ್ಕುಂ ನಿದರ್ಶನಾಲಂಕಾರಂ
--------------
ಶ್ರೀವಿಜಯ
ಗುಣಯುತನಪ್ಪನಂ ಸುಭಟನಪ್ಪನನಾಯುಧಯುಕ್ತನಪ್ಪನಂ ಪ್ರಣುತ ಸಮಸ್ತವೈರಿಗಣನಪ್ಪನನುಜ್ಜ್ವಲಕೀರ್ತಿಯಪ್ಪನಂ ಗಣಿದಮನೇನುಮಂ ಬಗೆಯದಾಗಡುಮಂತೆ ಪರೋಪಕಾರಕಾ ರಣಪರನಪ್ಪನಂ ಮನದೆ ಮೆಚ್ಚದರಾರಭಿಮಾನಿಯಪ್ಪನಂ
--------------
ಶ್ರೀವಿಜಯ
ಗೞಿಯಿಸಿದರ್ಥಂ ಸಲೆ ಪಾಂ ಗೞಿಯದೆಯುಂ ಶಬ್ದಮೊಂದದಿರ್ದೊಡೆ ಮುತ್ತುಂ ಮೆೞಸುಂ ಕೋದಂತಿರ್ಕುಂ ಕೞಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ
--------------
ಶ್ರೀವಿಜಯ
ಚ್ಯುತಯಾಥಾಸಂಖ್ಯಾರ್ಥ ಪ್ರತೀತದೋಷಾನುವಸಥಮೆಂದಱೆಗೆ ಬುಧರ್ ಸತತತಮದಱೆಯೆ ನಿದರ್ಶನ ಗತಮಿಂತಕ್ಕುಂ ಪ್ರಮೋದದಿಂ ಕವಿಜನದೊಳ್
--------------
ಶ್ರೀವಿಜಯ
ಜಿನಚರಣನಖಾದರ್ಶಂ ವಿನತಾಮರರಾಜರಾಜವದನಪ್ರತಿಮಂ ಮನದೊಲ್ ಸಲೆ ನಿಲ್ಕೆಂಬುದು ವಿನಿಶ್ಚಿತ ವಿಶೇಷಣೋರು ರೂಪಕಮಕ್ಕುಂ ವಿಷಮ ರೂಪಕಂ
--------------
ಶ್ರೀವಿಜಯ
ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ತಾಮರೆಯರಲೊಲ್ ಸರಸನಿ ಜಾಮೋದದೊಳೊಂದಿ ನಲಿದು ಮಕರಂದರಜೋ ವ್ಯಾಮುಗ್ಧದೊಳೀ ಮುಗುಳೊಳ ಮಾ ಮಾೞ್ಕಿಯನಱಸಿ ಸುೞಿವುದಳಿ ಕೆಲಕೆಲದೊಳ್
--------------
ಶ್ರೀವಿಜಯ
ತಿರಿವುದದೊಂದು ಚಕ್ರದೊಳೆ ನಿಂದು ದಿವಾ ಕರನೆ ಮತ್ತ [ರಿ] ದು ಕಳೆವೊಡಂತದನಾವೆಡೆಯಿಂ ದರಮೆಯಾಗಿ ನೆಲಸಿ ಕೆಲಕಾಲದಿಂ ಪೊರೆದಿರದೞಿದಬೞಿಕತಾ ನೆಲದೊಳ್ (ನುಸುಳು)
--------------
ಶ್ರೀವಿಜಯ
ದೊರೆಕೊಳೆ ಪೇಳ್ದರ್ಥಮನಾ ದರದಿಂ ಸಾಧಿಸಲೆವೇಡಿ ಪೆರತೊಂದರ್ಥಾಂ ತರಮಂ ಪೇೞ್ವುದದರ್ಥಾಂ ತರವಿನ್ಯಾಸಾಖ್ಯಮದಱದೀ ಭೇದಂಗಳ್
--------------
ಶ್ರೀವಿಜಯ
ದೊರೆಕೊಳ್ವಂತಿರೆ ಮುನ್ನಂ ವಿರೋಧಿಗತಮಾರ್ಗಭೇದಮಂ ತೋಱಿದೆನಾ ದರದಿನುಪಮಾದಿಗಳೊಳಂ ನಿರುತಮನುಕ್ತಮುಮನಱಿಗೆ ಲಕ್ಷ್ಯಾಂತರದೊಳ್
--------------
ಶ್ರೀವಿಜಯ