ಒಟ್ಟು 26 ಕಡೆಗಳಲ್ಲಿ , 1 ಕವಿಗಳು , 26 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಗೀತಾರ್ಥಂ ಪೂರ್ವಾ ಪರದೊಳ್ ಬಗೆವಾಗಳೆಂದುಮೊಂದಱೊಳೊಂದುಂ ದೊರೆಕೊಂಡೊಂದದೊಡದು ದು ಷ್ಕರಮೆ ವಿರುದ್ಧಾರ್ಥಮೆಂಬುದಾದಂ ದೋಷಂ
--------------
ಶ್ರೀವಿಜಯ
ಪುಲಿಪುಲಿ ಪರಿಪರಿ ಪೋಪೋ ಗೆಲೆಯೆಲೆ ಪೆಱಪಿಂಗುಪಿಂಗು ನಿಲ್ ನಿಲ್ ಬಾಬಾ ಬಲಿ ಮನಮನಂಜದಂಜದೆ ತೊಲತೊಲಗೀ ಮೆಳೆಗೆ ಪುಲಿಯದೆಂಬುದು ಮಾರ್ಗಂ
--------------
ಶ್ರೀವಿಜಯ
ಪ್ರಾಸಾನುಪ್ರಾಸಾಂತ ಪ್ರಾಸಂಗಳ್ ಮೂಱುಮತಿಶಯಂಗಳ್ ಪ್ರಾಸಾ ಭಾಸಂಗಳುೞಿರಿದ ಮೂಱು೦ ಭಾಸುರ ನೃಪತುಂಗದೇವ ವಿದಿತ ಕ್ರಮದಿಂ (ಗೀತಿಕೆ)
--------------
ಶ್ರೀವಿಜಯ
ಪೞಿಗೆ ಮೇಣ್ ಪೊಗೞ್ಗಿ ಮೇಣ್ ನೆವಮಿಲ್ಲದೊಡಿಂತು ಕೈ ಗೞಿಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುೞಿವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗೞಿಯ [ದ]೦ತಿದನಿಂತಿರೆ ಪೇೞ್ಗಿ ವಿಕಲ್ಪಮಂ (ಗೀತಿಕೆ)
--------------
ಶ್ರೀವಿಜಯ
ಬರಮೆಮಗೀಗೆ ದೇವತೆಗಳಾದರದಿಂ ಕರುಣಿಪ್ಪುದಕ್ಕೆ ಬಂ ಧುರಗುಣ ಬಂಧುಸಂತತಿಯನೆಂಬುದು ಕಾರಕದೋಷಮಾಗಳುಂ ಬರವನಮೋಘಮೀಗೆಮಗೆ ದೇವತೆಗಳ್ ಕರುಣಿಪ್ಪುದಕ್ಕೆ ಬಂ ಧುರ ಗುಣಬಂಧುಸಂತತಿಗೆ ನಿಕ್ಕುವಮೆಂಬುದದುಷ್ಟಕಾರ (ಕಂ)
--------------
ಶ್ರೀವಿಜಯ
ಮಿಗೆ ಕನ್ನಡಗಬ್ಬಂಗಳೊ ಳಗಣಿತಗುಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗದಿಸುವರ್ಗದ್ಯಕಥಾ ಪ್ರಗೀತಿಯಿಂ ತಚ್ಚಿರಂತನಾಚಾರ್ಯರ್ಕಳ್
--------------
ಶ್ರೀವಿಜಯ
ವರರೂಪಕಾದ್ಯಳಂಕಾ ರರಚನೆಯೊಳ್ ಮುನ್ನೆ ಪೇೞ್ದು ಬಂದೆಂ ಕೆಲವಂ ದೊರೆಕೊಳೆ ಬಗೆಗೀ ತೆಱದಿಂ ನಿರಂತರವಿರುದ್ಧನಿಯಮಿತ ಶ್ಲೇಷಗಳಂ
--------------
ಶ್ರೀವಿಜಯ
ವಾರಿ ವಾರಿಯೊಳಾದಾನಂ ವಾರಿವಾರಿ ವಿತರ್ಕಮಂ ವಾರಿವಾರಿ ಜವೋದಾನಂ ವಾರಿವಾರಿಜನಾಭನೊಳ್ (ಗೀತಿಕೆ)
--------------
ಶ್ರೀವಿಜಯ
ವಿದಿತಸಮಸಂಸ್ಕೃತೋದಿತ ಪದಂಗಳೊಳ್ ಪುದಿದು ಬೆರಸಿ ಬರೆ ಕನ್ನಡದೊಳ್ ಮುದಮನವು ತರ್ಕುಮತಿಶಯ ಮೃದಂಗ ಸಂಗೀತಕಾದಿ ಮಧುರರವಂಬೋಲ್
--------------
ಶ್ರೀವಿಜಯ
ವಿಳಸಿತ ಸಸ್ಯಸಂಪದಭಿರಾಮಗುಣೋದಯೆ ತಾಳ್ದಿದಳ್ ಧರಾ ಲಳನೆ ವಿಶಾಲಲಕ್ಷ್ಮಿಯನನಾರತಮೆಂಬುದು ದಕ್ಷಿನಾಪಥಂ ಜಳನಿಧಿಮೇಖಲಾವಲಯಿತಾಂಗಿ ಕರಂ ಸೊಗಯಿಪ್ಪುದಾಯ್ತು ಭೂ ಲಳನೆ ವಿಶಾಲಲಕ್ಷ್ಮಿಯನನಾಕುಳಮೆಂಬುದಿದುತ್ತರಾಪಥಂ (ಗೀತಿಕೆ)
--------------
ಶ್ರೀವಿಜಯ
ವ್ಯತಿರೇಕ ವಿಕಲ್ಪಮನನು ಗತಕ್ರಮ ವಿಶೇಷಗುಣಕೃತಾಂತಮನೞಿಗೀ ಮತದಿಂ ಯಾಥಾಸಂಖ್ಯಾ ಪ್ರತಿತೀಯಂ ತೋರ್ಪೆನನ್ವಿತಾನನ್ವಿತಮಂ
--------------
ಶ್ರೀವಿಜಯ