ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮದಮುದಿತಾಳಿ ಕದಂಬಂ ಮೃದುವಿಳಸಿತ ಸರಸಕೇಸರಂ ಸರಸಿರುಹಂ ವದನಮಿದು ಲೋಲಲೋಚನ ಮುದಿತಂ ಸ್ಮಿತದಶನವಸನ ರಾಗೋಪಚಿತಂ
ಮಲಯಜಚರ್ಚಿತೆಯಂ ಕೇ ವಲ ಧವಳಾಭರಣೆಯಂ ದುಕೂಲಾಂಬರೆಯಂ ಕೆಲದೊಳ್ ನಿಲೆಯುಂ ಜ್ಯೋತ್ಸ್ನಾ ವಿಲಾಸದೊಳ್ ಬಗೆದೆನಿಲ್ಲ ನಲ್ಲಳನಿನಿಸಂ
ಮಲಯರುಹ ಶಿಶಿರಕರ ಶೀ ತಲಿಕಾ ಕರಕೇಂದು ಕಾಂತಜಲಶೀತಳಮೀ ಲಲನಾಲಿಂಗನ ಸುಖಕರ ವಿಲಾಸಮೆಂಬುದು ಬಹೂಪಮಾನವಿಕಲ್ಪಂ ಅಸಂಭವೋಪಮೆ
ಮಾನಿಯುಮುದಾರಚರಿತನು ಮಾನತರಿಪುನಿಕರನುಂ ಮನಸ್ವಿಯುಮಂತಾ ಮಾನಸರನಾರುಮಂ ಮನ ಕೇನುಂ ಮುಟ್ಟಲ್ಲದಂತು ಬಗೆವುದು ದೋಷಂ
ಶಶಧರಬಿಂಬಾನನೆಯಂ ಝಷಕೇತನ ಕೇತನಾಭತನುತನುವಂ ತಾಂ ಬಿಸವಿಶದ ವರ್ಣೆಯಂ ಕಂ ಡೊಸೆದಂ ಬಸದೊಳಗೆ ಜನಕತನಯಳನಣುವಂ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ