ಒಟ್ಟು 32 ಕಡೆಗಳಲ್ಲಿ , 1 ಕವಿಗಳು , 31 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನೆಗೞ್ದರ್ದ ಕನ್ನಡಂಗಳೊ ಳಗಣಿತ ಗುಣ ವಿದಿತ ಸಂಸ್ಕೃತತೋಕ್ತಕ್ರಮಮಂ ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗಂ ಕಾವ್ಯಬಂಧಮೆಂದುಮನಿಂದ್ಯಂ
--------------
ಶ್ರೀವಿಜಯ
ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ ಪೊಲಗೆಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆಂದಱೆದಿರ್ದುಂ
--------------
ಶ್ರೀವಿಜಯ
ಪದನಱೆದು ನುಡಿಯಲುಂ ನುಡಿ ದುದನಱೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಱೆತೋ ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
--------------
ಶ್ರೀವಿಜಯ
ಪರಮ ಶ್ರೀ ವಿಜಯಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತುವಿಸ್ತರ ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
--------------
ಶ್ರೀವಿಜಯ
ಪರಿವೃತ ನೃಪತುಂಗದೇವಮಾರ್ಗಾಂ ತರಗತಬೋಧ ವಿಶೇಷಯಾನಪಾತ್ರಂ ಪರಮಗುಣ ಪರೀತಕಾವ್ಯರತ್ನಾ ಕರದುರುಪಾರಮನೆಯ್ದುಗುಂ ಮಹಾತ್ಮಂ
--------------
ಶ್ರೀವಿಜಯ
ಪಾಪಮಿದು ಪುಣ್ಯಮಿದು ಹಿತ ರೂಪಮಿದಹಿತಪ್ರಕಾರಮಿದು ಸುಖಮಿದು ದುಃ ಖೋಪಾತ್ತಮಿದೆಂದಱೆಪುಗು ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್
--------------
ಶ್ರೀವಿಜಯ
ಪ್ರಣುತ ಗುಣಸೂರಿ ನಾರಾ ಯಣ ಭಾರವಿ ಕಾಳಿದಾಸ ಮಾಘಾದಿಗಳೀ ಗಣಿದದೊಳೆ ಮಹಾಕಾವ್ಯ ಪ್ರಣಯಮನಾಗಿಸಿದರಮಳ ಕವಿವೃಷಭರ್ಕಳ್
--------------
ಶ್ರೀವಿಜಯ
ಬೆರಸಿರೆ ಸಮಾಸದೊಳ್ ಬಂ ಧುರಮಾಗದು ಕಾವ್ಯಬಂಧಮೆಂದುಂ ಕೃತಿಯೊಳ್ ದೊರೆಕೊಳ್ವ ಪದವಿಶೇಷ್ಯಾಂ ತರಮದಱೆ೦ ವ್ಯಸ್ತಮಾಗಿ ಪೇೞ್ಗಿದನೆಂದುಂ
--------------
ಶ್ರೀವಿಜಯ
ಬೆರೆಸಿರೆ ಕನ್ನಡದೊಳ್ ಬಂ ಧುರಮಾಗದು ಕಾವ್ಯರಚನೆ ಪೇೞ್ಡೊಡೆ ಪೀನಂ ಪರುಷತರಮಕ್ಕುಮೊತ್ತುಂ ಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೋಲ್
--------------
ಶ್ರೀವಿಜಯ
ಭಾವಿಸಿ ಶಬ್ದತತ್ತ್ವಸಮಯಸ್ಥಿತಿಯಂ ಕುಱಿ ತೊಂದಶೇಷಭಾ ಷಾವಿಷಯೋಕ್ತಿಯಂ ಬಗೆದುನೋಡಿ ಪುರಾಣಕವಿಪ್ರಭುಪ್ರಯೋ ಗಾವಿಳ ಸದ್ಗುಣೋದಯಮನಾಯ್ದವಱಿ೦ ಸಮೆದೊಂದು ಕಾವ್ಯದಿಂ ಶ್ರೀವಿಜಯಪ್ರಭೂತಮುದಮಂ ತನಗಾಗಿಸಿದೊಂ ಕವೀಶ್ವರಂ
--------------
ಶ್ರೀವಿಜಯ
ಮಿಗೆ ದುಷ್ಕರ ಕಾವ್ಯಂಗಳೊ ಳಗರ್ಹಿತಪ್ರಾಯಮಕ್ಕುಮಾಶ್ರುತಿಕಷ್ಟಂ ಪಗರಣದೊಳುಱಿದ ಮೂಱು೦ ನಗಿಸುಗುಮಪ್ಪುದಱಿನಲ್ಲಿಗಂತವದೋಷಂ
--------------
ಶ್ರೀವಿಜಯ
ಮಿಗೆ ವಸ್ತುಗತ ಸ್ಥಿತಿಯಂ ಬಗೆದಗ್ಗಳಮಾಗೆ ಪೇೞ್ದೊಡಕ್ಕು ಮುದಾರಂ ಬಗೆವೊಡೆ ಕಾವ್ಯದ ಪದವಿಯ ನೆಗೞ್ತಿಗದು ಮೂಲಮದಱ ಪಾಂಗಿಂತಕ್ಕುಂ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ವ್ಯಾಕರಣ ಕಾವ್ಯನಾಟಕ ಲೋಕಕಳಾ ಸಮಯಮಾದಳಂಕೃತಿಗಳೊಳಂ ವ್ಯಾಕುಳನಲ್ಲದನೇಕೆ ವಿ ವೇಕಬೃಹಸ್ಪತಿಯ ನಗರಮಂ ಪುಗುತರ್ಪಂ
--------------
ಶ್ರೀವಿಜಯ