ಒಟ್ಟು 19 ಕಡೆಗಳಲ್ಲಿ , 1 ಕವಿಗಳು , 18 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರಗಿರಿವೋಲ್ ಧೈರ್ಯದಿನಂ ಬರಮಣಿವೋಲ್ ತೇಜದಿಂ ಶಶಾಂಕಂಬೋಲ್ ಬಂ ಧುರ ಕಾಂತಿಗುಣದಿನೆಂದಿಂ ತಿರೆ ಪೇಳ್ವುದನಱಿದುಕೊಳ್ಗೆ ಹೇತೂಪಮೆಯಂ ಹೇತೊಪಮೆ
--------------
ಶ್ರೀವಿಜಯ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ
--------------
ಶ್ರೀವಿಜಯ
ಸ್ಮಿತಕುಸುಮಮಧರಪಲ್ಲವ ಮತಿಶಯನಯನಾಳಿ ಬಾಹುಶಾಖಂ ಕಾಂತಾಂ ಲತೆಯೆಂದಿಂತು ಸಮಸ್ತಾ ಶ್ರಿತಂ ಸಮಸ್ತಂ ಸಮಸ್ತರೂಪಕಮಕ್ಕುಂ ಸಮಸ್ತರೂಪಕಂ
--------------
ಶ್ರೀವಿಜಯ