ಒಟ್ಟು 538 ಕಡೆಗಳಲ್ಲಿ , 1 ಕವಿಗಳು , 322 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಿಸಿ ಸಮಸ್ತವಸ್ತು ವಿ ಭಾವಿತ ಜಾತಿಕ್ರಿಯಾಗುಣದ್ರವ್ಯಸ್ವಾ ಭಾವಿಕ ಗುಣಮಂ ಪೇೞ್ವುದು ಕೇವಲಮಾ ಜಾತಿಯೆಂಬ ಸದಳಂಕಾರಂ
--------------
ಶ್ರೀವಿಜಯ
ಭಾವೆಯಂ ನುಸುಳುಮಸ್ಪಷ್ಟಾಕ್ಷರಮು ಮಾವರ್ಣವ್ಯತ್ಯಯಮಂ ಬಿಂದುಚ್ಯುತಿಯಂ ಭಾವಿಸಿದೊರ್ನುಡಿಯಂ ವರ್ಣಚ್ಯುತಮಂ ಕೇವಳಮವಱ ಭೇದಮಂ ಸುಸಮಸ್ತಕಮಂ
--------------
ಶ್ರೀವಿಜಯ
ಮಗುಳ್ದುಂ ಮಗುೞ್ದಾಮಾತಂ ನೆಗಳ್ದಿರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ ಸ್ವಗತಾಳಂಕಾರಂ ಬಗೆ ಗಗಾಧಮನರದಱ ತೆಱನನೀ ಕುಱಿಪುಗಳಿಂ
--------------
ಶ್ರೀವಿಜಯ
ಮದಕರಿಯೋ ಘನಸಮಯಾಂ ಬುದಮೋ ಘನಮಲ್ತು ನೆಗೞ್ವುದದಱೊಳ್ ಸಪ್ತ ಚ್ಛದಗಂಧಸುರಭಿ ಪದುಳಂ ಮದಕರಿಯೆನೆ ನೆನೆಗೆ ಸಂಶಯಾಕ್ಷೇಪಮಕಂ ಸಂಶಯಾಕ್ಷೇಪ
--------------
ಶ್ರೀವಿಜಯ
ಮದಮಾನಮಾಯಭಯಲೋಭವಿಷಾದಹರ್ಷಾ ಭ್ಯುದಿತಾಂತರಂಗರಿಪುವರ್ಗ ಜಯಾವತಾರಂ ವಿದಿತಸ್ಪಧೀ ವಿಭವ ಭಾವಿತ ವಿಶ್ವಲೋಕಂ ಬುಧರ್ಗೋತು ಕಾವನನುನೀತಗೃಹೀತವಾಕ್ಯಂ
--------------
ಶ್ರೀವಿಜಯ
ಮದಮುದಿತಾಳಿ ಕದಂಬಂ ಮೃದುವಿಳಸಿತ ಸರಸಕೇಸರಂ ಸರಸಿರುಹಂ ವದನಮಿದು ಲೋಲಲೋಚನ ಮುದಿತಂ ಸ್ಮಿತದಶನವಸನ ರಾಗೋಪಚಿತಂ
--------------
ಶ್ರೀವಿಜಯ
ಮನದೊಳಗಾಗಳುಂ ನಿಱೆ ಸದಾ ಮುಳಿಸಂ ಗತರಾಗ ಮೋಹನೊ ಯ್ಯನೆ ಮುನಿನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ ಮನದೊಳಗಾಗಳುಂ ನಿಱೆ ಸದೊಯ್ಯನೆ ಮೋಹಮನಂತೆ ರಾಗಮಂ ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯವಾಚಕಂ
--------------
ಶ್ರೀವಿಜಯ
ಮನೆಗಿಂದು ಬರ್ಕುಮೆಂದಾ ನನೇಕತರವಸ್ತುವಾಹನಾದಿಯನೊಸೆದಿಂ ಬನೆ ಪಸರಿಸಿ ಕುಡಲಿರ್ದೆಂ ಜನೇಶನಿಂತೇಕೆ ಕೞಿದು ಪೋದನೊ ಪೇೞಿ
--------------
ಶ್ರೀವಿಜಯ
ಮಲಯಜಚರ್ಚಿತೆಯಂ ಕೇ ವಲ ಧವಳಾಭರಣೆಯಂ ದುಕೂಲಾಂಬರೆಯಂ ಕೆಲದೊಳ್ ನಿಲೆಯುಂ ಜ್ಯೋತ್ಸ್ನಾ ವಿಲಾಸದೊಳ್ ಬಗೆದೆನಿಲ್ಲ ನಲ್ಲಳನಿನಿಸಂ
--------------
ಶ್ರೀವಿಜಯ
ಮಲಯರುಹ ಶಿಶಿರಕರ ಶೀ ತಲಿಕಾ ಕರಕೇಂದು ಕಾಂತಜಲಶೀತಳಮೀ ಲಲನಾಲಿಂಗನ ಸುಖಕರ ವಿಲಾಸಮೆಂಬುದು ಬಹೂಪಮಾನವಿಕಲ್ಪಂ ಅಸಂಭವೋಪಮೆ
--------------
ಶ್ರೀವಿಜಯ
ಮಲಯಾನಿಳನೆಸಕದಿನುದಿ ರ್ವಲರ್ಗಳ ಮಕರಂದಮಾಲೆಗಳ್ ಪರೆದತ್ತಂ ನೆಲದೊಲ್ ಬಿೞ್ದುಂ ಪಡೆದುವು ವಿಲೋಚನಾಂಬುಗಳನಗ್ಗಳಂ ವಿರಹಿಗಳಾ
--------------
ಶ್ರೀವಿಜಯ
ಮಸಗಿ ಬೆಸದಿರ್ದು ವಿವರಮ ನಸಿಯದಱಿಡೆವೊತ್ತಿ ಪೊಕ್ಕು ಕೆಲನಂ ಕೊರ್ಬು ತ್ತೆಸೆದು ಬಿದಿರ್ದಾ [ರ್ದೇ] ೞ್ಗೇ ೞ್ಗೆ ಸಮಂಜಸನಿಕ್ಕಿ ಮಿಕ್ಕನರಿವಾಹಿನಿಯಂ
--------------
ಶ್ರೀವಿಜಯ
ಮಾತಱೆ ವರ್ ಕೆಲಬರ್ ಜಗ ತೀತಳಗತ ಮನುಜರೊಳಗೆ ಮಾತಱೆ ವವರೊಳ್ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮ ಕವಿ ವೃಷಭರ್ಕಳ್
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ
ಮಾನಧನಾ ಪೊಗೞಿಸಲೇಂ ದಾನಿಯೆ ನೀನುಂತೆ ನಿನ್ನ ಕಸವರಮೆಂದುಂ ದೀನಾನಾಥರ ಕೆಯ್ಯದು ದಾನಿಯದೆಂತೆಂಬುದಿಂತು ಹೇತ್ವಾಕ್ಷೇಪಂ ಹೇತ್ವಾಕ್ಷೇಪ
--------------
ಶ್ರೀವಿಜಯ