ಒಟ್ಟು 1378 ಕಡೆಗಳಲ್ಲಿ , 1 ಕವಿಗಳು , 481 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲನಿಧಿಯಂ ಪಾಯ್ದೊರ್ವನೆ ನಿಲಿಕಿ ದಶಾನನನ ಪೊಳಲನಾ ಲಂಕೆಯನಾ ಕುಲಮಿಲ್ಲದಿಱಿದು ನಿಂದಂ ಕಲಿಯಾದಂ ಬಗೆದು ನೋೞ್ಪೋಡದ್ಭುತಮಾದಂ ಅದ್ಭುತ
--------------
ಶ್ರೀವಿಜಯ
ಜಲರಾಶಿಪ್ರಭವೆಯನವಿ ಕಲ ಕೃಷ್ಣಗುಣಾನುರಕ್ತೆಯಮ ಮಿಗೆ ಲಕ್ಷ್ಮೀ ಲಲನೆಯನಾಂತುಂ ವಕ್ಷ ಸ್ಥಲದೊಳ್ ಪೇೞಿ೦ತುದಾರ ಚರಿತನೆ ಅಪ್ಪಯ್
--------------
ಶ್ರೀವಿಜಯ
ಜಾಣರ್ಕಳಲ್ಲದವರುಂ ಪೂಣಿಗರಱೆಯದೆಯುಮಱೆವವೋಲವಗುಣದಾ ತಾಣಮನಿನಿಸೆಡೆವೆತ್ತೊಡೆ ಮಾಣದೆ ಪಿಡಿದದನೆ ಕೃತಿಗಳಂ ಕೆಡೆನುಡಿವರ್
--------------
ಶ್ರೀವಿಜಯ
ಜಾತಿಕ್ರಿಯಾಗುಣದ್ರ ವ್ಯಾತಿಶಯ ವಿಶೇಷಿಯಪ್ಪ ಪದಮೊರ್ಬೞಿನಿಂ ದೀ ತೆಱದಿನುೞಿದ ವಾಕ್ಯಸ ಮೇತಿಗಮುಪಕಾರಯೋಗ್ಯದೀಪಕಮಕ್ಕುಂ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ತಡವಡಿಸಿ ಯತಿಯನಿಂತಿರೆ ತೊಡರ್ಚಿ ಕೆಡೆಪೇೞ್ದೊಡಕ್ಕುಮದು ಯತಿಭಂಗಂ ಸಡಲಿಸದಲಸದ (ದ)೦ ಪೇ ೞ್ವೆಡೆಯೊಳ್ ನಿಲೆಪೇೞಲಾರ್ಪೊಡಂತ [ದ] ದೋಷಂ
--------------
ಶ್ರೀವಿಜಯ
ತಡೆತಡೆದು ಕಾಂತನಲ್ಲಿಗೆ ನಡೆಯಲ್ ಬಗೆದೆನೆಗೆ ಕಾರ ಕಾರಿರುಳೊಳ್ ಸ ಯ್ತಡವಡಿಕೆಗಳಂ ತೊಡೆದ ತ್ತೆಡೆವಱಿಯದೆ ಪೊಳೆದ ಮಿಂಚು ಮುಗಿಲೆಡೆಯೆಡೆಯೊಳ್
--------------
ಶ್ರೀವಿಜಯ
ತರಳತರಲೋಚನಂ ನಿ ರ್ಭರರಾಗರಸಂ ಮುಖಾರವಿಂದಂ ನಿನ್ನಾ ದೊರೆಕೊಳಿಸಿದೊಸಗೆಯೇಂ ಬಂ ಧುರಮೆಂಬುದಿದವಯವಿ ಕ್ರಮಂ ರೂಪಕದೊಳ್ ಅವಯವಿ ರೂಪಕಂ
--------------
ಶ್ರೀವಿಜಯ
ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
--------------
ಶ್ರೀವಿಜಯ
ತಱಿಸಂದು ಪಲವು ತೆಱದಿಂ ತೆಱಿದಿರೆ ನಿಗೞ್ದುರ್ದುದೊಂದು ವಸ್ತುಸ್ಥಿತಿಯಂ ಮಱಸಿ ಪೆಱತೊಂದು ಮಾಳ್ಕೆಯಿ ನಱಿಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ತಱಿಸಂದು ಮನದೊಳೊಂದಂ ಪೆಱತಂ ಮತ್ತದನೆ ಪೋಲ್ವುದಂ ಕುಱಿಪುಗಳಂ ಕುಱಿಮಾಡಿ ಮಾಡಿ ಪೇೞ್ದುದು ನೆಱಿಯೆ ಸಮಾಸೋಕ್ತಿಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ತಲೆಸೂಡಿ ಮುನ್ನೆ ಕಜ್ಜದ ಫಲಮಂ ಬೆಸಗೊಂಡುಮೇವನಲ್ಲಿಂ ಬೞಿಯಂ ತಲೆಯಂ ಕಿರಿಯಿಸಿ ದಿವಸಮ ನಲಸದೆ ಬೆಸಗೊಳ್ವನಂತು ಗಾವಿಲನಕ್ಕುಂ
--------------
ಶ್ರೀವಿಜಯ
ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ತಳಮಿತಮಧ್ಯೆಯನಾಯತ ವಿಳೋಳಲೋಚನೆಯನುನ್ನತಸ್ತನಯುಗೆಯಂ ಲಳಿತವಿಲಾಸಿನಿಯಂ ಕೋ ಮಳಾಂಗಿಯಂ ಪೃಥುನಿತಂಬಬಿಂಬೆಯನುೞಿದಂ ದ್ರವ್ಯಸ್ವಭಾವಾಖ್ಯಾನಂ
--------------
ಶ್ರೀವಿಜಯ
ತಳಿರ್ಗಳವೋಲ್ ಮೆಲ್ಲಿದುವೀ ತಳಂಗಳಳಿಕುಳದವೋಲ್ ವಿನೀಳಂಗಳ್ ನಿ ನ್ನಳಕಾಳಿಗಳೆಂಬುದನಾ ಕುಳಮಿಲ್ಲದೆ ವಿಬುಧರೞಿಗೆ ಧರ್ಮೋಪಮೆಯಂ ಧರ್ಮೋಪಮೆ
--------------
ಶ್ರೀವಿಜಯ