ಒಟ್ಟು 333 ಕಡೆಗಳಲ್ಲಿ , 1 ಕವಿಗಳು , 239 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪಾದದೊಳೆರಡನೆಯಕ್ಕರ ಮಾದರದಿಂದಾದುದಾವುದದನಱೆ ದನಿತಂ ಪಾದದೊಳಿಡುವುದದಕ್ಕುಂ ಭೇದೊಕ್ತಿಕ್ರಮ ವಿಚಾರಿತೋರು ಪ್ರಾಸಂ
ಪಾಪಮಿದು ಪುಣ್ಯಮಿದು ಹಿತ ರೂಪಮಿದಹಿತಪ್ರಕಾರಮಿದು ಸುಖಮಿದು ದುಃ ಖೋಪಾತ್ತಮಿದೆಂದಱೆಪುಗು ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್
ಪಾರ್ಥಿವ ಗುಣಯುತಮಾಗಿಯು ಮರ್ಥಿತಫಲದಾಯಿಯಾಗಿಯುಂ ನಿನ್ನೊಳ್ ತಾಂ ವ್ಯರ್ಥತೆಯಂ ಪಡೆಗುಂ ಪರ ಮಾರ್ಥವಚೇತತೆಯಿಂದೆ ಕಲ್ಪಕುಜಾತಂ
ಪಾರ್ಥಿವಲೋಕನಪ್ಪನೆಂದುಂ ಕವಿ ವರ್ಣಿಕುಂ ಸಾರ್ಥಚಯಂ ನುತಸರಸ್ವತೀ ತೀರ್ಥಾವತಾರಮಾರ್ಗನೆಸಕಂ ಸಾರ್ಥಮಪ್ಪಂತು ಚಿಂತಿತಕಾರ್ಯತತ್ವರಂ
ಪಾೞಿ ನಿಲೆ ನೆಗೞಿ ಬಾೞ್ವುದು ಬಾೞಿ೦ಬುದು ನಿಕ್ಕುವಂ ಗುಣಗ್ರಾಮಣಿಗಳ್ ಪಾೞಾಗೆ ತೆಗೞಿ ಬಾೞ್ವಾ ಬಾೞೀನಾಚಂದ್ರತಾರಮೋ ಮಾನಸರಾ
ಪೀನಂ ಕಾಡು ಮದಕ್ಕೇಂ ಕೇಳನಮಾನಳಿನಂ ಮದಾ ತಾನಿಂತಳಿಜನಂ ಕನಾ… ನದೆಸನೆದೇನನಾ ನಾದಭೇದನನಾದಾನಾ ನಾದಾನಾಮದನೋದನಾ ನಾದನೋದಮ ನಾದಾನಾ ನಾದಾನಾನಭೇದನಾ
ಪುಲಿಪುಲಿ ಪರಿಪರಿ ಪೋಪೋ ಗೆಲೆಯೆಲೆ ಪೆಱಪಿಂಗುಪಿಂಗು ನಿಲ್ ನಿಲ್ ಬಾಬಾ ಬಲಿ ಮನಮನಂಜದಂಜದೆ ತೊಲತೊಲಗೀ ಮೆಳೆಗೆ ಪುಲಿಯದೆಂಬುದು ಮಾರ್ಗಂ
ಪೊಡವಿಪತಿ ಗೊರವನೆನೆ ಪೇ ೞ್ಪಡೆ ಯದುವದೆಕರಿಸಿ ಕಬ್ಬಿಗರ್ದೂೞಿನೆಯುಂ ಹಡುಮಸುಮೞಿಸೆಟ್ಟಿಸು ಗೆಂ ಮುಡಿಯೊಳಮಾರ್ಗೆಂದು ನುಡಿವ ಪೞಗನ್ನಡಂ
ಪ್ರಣುತ ಗುಣಸೂರಿ ನಾರಾ ಯಣ ಭಾರವಿ ಕಾಳಿದಾಸ ಮಾಘಾದಿಗಳೀ ಗಣಿದದೊಳೆ ಮಹಾಕಾವ್ಯ ಪ್ರಣಯಮನಾಗಿಸಿದರಮಳ ಕವಿವೃಷಭರ್ಕಳ್
ಪ್ರತಿಕೂಲನಾಗಿ ನಿಲೆ ವಿಧಿ ಮತನಯಮನುಕೂಲಮಾಗಿ ನಿಲೆಯುಂ ಕಾರ್ಯ ಸ್ಥಿತಿಯಂ ಸಾಧಿಸಲಾಗದು ಮೃತಕಕೃತೋಪಕೃತಿಯವೊಲನರ್ಥಾಯಾಸಂ
ಪ್ರತಿಪದಾರ್ಥತತ್ತ್ವಭೇದದೊಳ್ ಪ್ರತಿಷೇಧಮಂ ನೆಗೞ್ಗುಮನಿತೆ ಮಾೞ್ಕಿಯಿಂ ದತಿಶಯಾಕ್ಷೇಪಗಣನಾವ್ಯತಿ ಗತಿ ನೃಪತುಂಗದೇವಮಾರ್ಗದೊಳ್
ಪೞಿಗೆ ಮೇಣ್ ಪೊಗೞ್ಗಿ ಮೇಣ್ ನೆವಮಿಲ್ಲದೊಡಿಂತು ಕೈ ಗೞಿಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುೞಿವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗೞಿಯ [ದ]೦ತಿದನಿಂತಿರೆ ಪೇೞ್ಗಿ ವಿಕಲ್ಪಮಂ (ಗೀತಿಕೆ)
ಬಂದುವು ಪಾವುಡಂ ನೃಪತಿಗೆಂಬುದುಮಾನೆಗಳೀ ಪ್ರದೇಶದೊಳ್ ನಿಂದುದಿದೆಂಬುದುಂ ವಚನದೋಷವಿಶೇಷಮನೈಪುಣೋಕ್ತಿಯಿಂ ಬಂದುದು ಪಾವುಡಂ ನೃಪತಿಗೆಂಬುದುಮಾನೆಗಳೀ ಪ್ರದೇಶದೊಳ್ ನಿಂದುವಿವೆಂಬುದು ಬಗೆದು ನೋಡೆ ಗುಣಂ ವಚನಕ್ಕೆ ನಿಕ್ಕುವಂ
ಬಗೆದಿಂಗಿತಬೇಷ್ಟಾಕಾ ರಗತಂಗಳಿನಂತರಂಗದೊಳ್ ಮರೆಸಿದುದಂ ಮಿಗೆ ಸೂಚಿಸುವುದು ಸೂಕ್ಷ್ಮಾ ನುಗತಾಳಂಕಾರಮಿಂತು ತದುದಾಹರಣಂ
ಬಗೆದು ಮಾರ್ಗದ್ವಿತಯಗತಿಗಳಂ ಪ್ರಗುಣಗುಣಗಣೋದಯರ್ಕಳ್ ವಿತರ್ಕದಿಂ ಸೊಗಯಿಸುವಂತು ವಚನರಚನೆಯಿಂ ನೆಗೞ್ದಿರೆ ಬೆರಸಿ ಪೇೞ್ಗಿ ರಸವಿಶೇಷದೊಳ್ (ವೃತ್ತ)