ಒಟ್ಟು 262 ಕಡೆಗಳಲ್ಲಿ , 1 ಕವಿಗಳು , 184 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವದನಾಂಬುಜರಂಗದೊಳೀ ಮದಾಲಸಭ್ರೂಲತಾವಿಲಾಸಿನಿ ಲೀಲಾ ಸ್ಪದ ನೃತ್ಯಮನಾಗಿಸಿದ ಪ್ಪುದಿದೆಂಬುದು ರೂಪಕೋರುರೂಪಕಮಕ್ಕುಂ ರೂಪಕ ರೂಪಕಂ
ವರವಾರನಾರಿಯೊಳ್ ನೆರೆದೆವಾನೆಲ್ಲಿ ನೆ[ರೆ]ದೆ ಪರವಾರನಾರಿಯೊಳ್ ನೆರೆದೆನಾನೆಲ್ಲಿ ನೀಂ ಪರದ [ರಂ] ತರಿಸುವರಿಂತರಿಯ ನೆಲ್ಲಂ ಪುರಿದು ಮಾಱದೆ ಕಾಣದಂತಿರಿಸಂಗಡಿಯೊಳ್ (ಯಮಕಂ)
ವಾರಿ ವಾರಿಯೊಳಾದಾನಂ ವಾರಿವಾರಿ ವಿತರ್ಕಮಂ ವಾರಿವಾರಿ ಜವೋದಾನಂ ವಾರಿವಾರಿಜನಾಭನೊಳ್ (ಗೀತಿಕೆ)
ವಿಗತಮಳಮುಪಾತ್ತಾರಾತಿಸಾರ್ಥಾರ್ಥವೀರಂ ಸ್ಥಗಿತಮಮಿತ ನಾನಾ ಶಬ್ದವೀಚಿ ಪ್ರಪಂಚಂ ನಿಗದಿತಗುಣರತ್ನೈಕಾಕರಂ ಸಾಗರಂಬೋಲ್ ಸೊಗಯಿಸಿ ಧರಣೀ ಚಕ್ರಾಂಬ ರಾಕ್ರಾಂತಮಕ್ಕುಂ
ವಿಗಳಿತರಾಗನಾವೊಂ ನಿನ್ನಾವುದಱ ಸೊಗಯಿಸುಗುಂ ಕಟಕತ್ವಮಂ ಸಮರ್ಥಬಲಂ ಬಗೆದೆನಗೊಯ್ಯನೆಸಗೆಯಿದುವೊದಾ ಲಗಲಲಾಟಿಸುಗುಮದೆಪೇೞ್ದಿಂ ಬನದೊಳ್ (ಸಮಂತಿ)
ವಿನಿಮೀಳಾದಿಗಳಿವು ಲೋ ಚನಾದಿ ಧರ್ಮಂಗಳಿವನೆ ಕುಮುದಾದಿಗಳೊಳ್ ನೆನೆದಿಂತು ಪೇೞ್ದೊಡಕ್ಕುಂ ವಿನಿಶ್ಚಿತ ಕ್ರಮ ಸಮಾಹಿತಾಲಂಕಾರಂ
ವಿನಿಹತ ಸಮಸ್ತರಿಪುಕುಳ ನನಿಮಿಷಲೋಚನದೆ ನೋಡಿ ನೀಡುಂ ಪ್ರಿಯೆಯಂ ವಿನಿಮೀಳಿತಲೋಚನೆಯಂ ಜನಪತಿ ನಿಜಬಾಹುಯುಗದಿನಾಶ್ಲೇಷಿಸಿದಂ
ವಿಪರೀತಂ ತರುತತಿಯ ವೊ ಲಪರಾಗಂ ಶುದ್ಧಭೂಮಿವೋಲ್ ಪದ್ಮಿನಿವೋ ಲುಪಗತವಿಭ್ರಮ ರಹಿತಂ ಕುಪಿತಾಕೃತಿಯೆಂಬುದುಪಮೆ ಸಂಧಾನಾಂಕಂ ಸಂಧಾನೋಪಮೆ
ವಿಪುಳತರಕಟಕನುದ್ಯದ್ ದ್ವಿಪಹರಿಮಹಿಷೀನಿಷೇವ್ಯನುನ್ನತಪಾದಂ ವ್ಯುಪನೀತಶ್ರೀಫಲದಂ ವಿಪರೀತಕನಪ್ಪನಂತು ಭೂಭೃನ್ನಾಥಂ
ವಿಮಳೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೀ ಕ್ರಮದೊಳ್ ನೆಗೞ್ಚಿ ಗದ್ಯಾ ಶ್ರಮಪದ ಗುರುತಾ ಪ್ರತೀತಿಯಂ ಕೆಯ್ಕೊಂಡರ್
ವಿರಹಂ ಪರಿತಾಪಮನಾ ಪರಿತಾಪಮುಮಳಿಪನಳಿಪು ಮಾವಲ್ಲಭನೊಳ್ ನೆರೆದಿರ್ಪ ಬಗೆಯನಾ ನೆರೆ ದಿರವುಂ ಸುರತಾನುರಾಗಮಂ ಪೆರ್ಚಿಸುಗುಂ
ವಿಲಸಿತ ಭವದಭ್ಯಾಗಮ ಜಲಧಾರೆಗಳೇನುಮುೞಿಯದಂತು ಮದಂತ ರ್ಮಲಮಂ ಕರ್ಚಿದೊಡಾನೀ ನೆಲಕೆಲ್ಲಂ ಪಾವನೀಯ ಚರಿತನೆನಾದೆಂ
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ
ವಿಳಸಿತ ಸಸ್ಯಸಂಪದಭಿರಾಮಗುಣೋದಯೆ ತಾಳ್ದಿದಳ್ ಧರಾ ಲಳನೆ ವಿಶಾಲಲಕ್ಷ್ಮಿಯನನಾರತಮೆಂಬುದು ದಕ್ಷಿನಾಪಥಂ ಜಳನಿಧಿಮೇಖಲಾವಲಯಿತಾಂಗಿ ಕರಂ ಸೊಗಯಿಪ್ಪುದಾಯ್ತು ಭೂ ಲಳನೆ ವಿಶಾಲಲಕ್ಷ್ಮಿಯನನಾಕುಳಮೆಂಬುದಿದುತ್ತರಾಪಥಂ (ಗೀತಿಕೆ)
ವ್ಯಾಕರಣ ಕಾವ್ಯನಾಟಕ ಲೋಕಕಳಾ ಸಮಯಮಾದಳಂಕೃತಿಗಳೊಳಂ ವ್ಯಾಕುಳನಲ್ಲದನೇಕೆ ವಿ ವೇಕಬೃಹಸ್ಪತಿಯ ನಗರಮಂ ಪುಗುತರ್ಪಂ