ಒಟ್ಟು 1378 ಕಡೆಗಳಲ್ಲಿ , 1 ಕವಿಗಳು , 481 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೈರಿಕರಸಾರ್ದ್ರಮಂ ಸಿಂ ಧೂರದೆ ತಲೆವಱಿದುದಂ ಕರಂ ಕಂಡಾಂ ಸಂ ಧ್ಯಾರಾಗದೊಳಱಿಯದೆ ಮದ ವಾರಣಮಂ ಸೋಂಕಿ ಕೆಲದೊಳೊಯ್ಯನೆ ಪೋದೆಂ
--------------
ಶ್ರೀವಿಜಯ
ಗೋಪಾಳ ಬಾಳ ಲಲನಾ ಚಾಪಳ ವಾಚಾಳ ಕಿತವ ಬಾಹ್ಲೀಕಾದಿ ವ್ಯಾಪಾರಂಗಳ್ ಗ್ರಾಮ್ಯಾ ಳಾಪಂಗಳ್ ಮಾರ್ಗಯುಗಳ ಪರಿಹಾರ್ಯಂಗಳ್
--------------
ಶ್ರೀವಿಜಯ
ಗೞಿಯಿಸಿದರ್ಥಂ ಸಲೆ ಪಾಂ ಗೞಿಯದೆಯುಂ ಶಬ್ದಮೊಂದದಿರ್ದೊಡೆ ಮುತ್ತುಂ ಮೆೞಸುಂ ಕೋದಂತಿರ್ಕುಂ ಕೞಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ
--------------
ಶ್ರೀವಿಜಯ
ಘನಮೆರಡನೆಯದಱೊಳಮಾ ಱನೆಯ ವಿಭಕ್ತಿಯೊಳಮೊಳವು ಗುರುಲಘುಭೇದಂ ಅನಿಯತ ವೃತ್ತಿಯನಱಿದಿದ ನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿಪುಣಂ
--------------
ಶ್ರೀವಿಜಯ
ಘನಸ್ತನಿತಮುಂ ಕೇಕಿಸ್ವನಮುಂ ನೀರಧಾರೆಯುಂ ಮನಂ ಬೆರ್ಚಿರ್ಕುಮಿಂತೆತ್ತಂ ಘನಮಿಂತು ಘನಸ್ತನಿ (ಗೂಢಚತುರ್ಥಂ) ನಿನ್ನಿಂ ನಿಂನ್ನನೆನೆಂನಿನಾ ನಾನಾನನನಂ ನನನಂ ನೀನೆಂನನ್ನಂನನಾನಾ ನಿಂನೆನೆನನನೂನನಂ
--------------
ಶ್ರೀವಿಜಯ
ಚಲದೆಡೆಗೆ ಪಿರಿದು ರಜಮುಂ ನೆಲನುಂ ಪ್ರಿಯದೆಡೆಗೆ ಕಿಱಿದು ಕೊಳಲುಂ ಕುಡಲುಂ ಚಲಮುಂ ಪ್ರಿಯಮುಂ ಬೞಿ ಸಮ ಬಲಮಾಗಿರೆ ನೆಗೞ್ವಿ ಬಗೆಗೆ ಕಿಱಿದೇಂ ಪಿರಿದೇಂ
--------------
ಶ್ರೀವಿಜಯ
ಚಾರು ಶ್ರೀ ನೃಪತುಂಗ ವಿ ಚಾರ ಕ್ರಮ ಮಾರ್ಗಗಣನೆಯೊಳ್ ಪರಮಾಲಂ ಕಾರವಿಭಾಗಂ ವಿವಿಧಾ ಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ
--------------
ಶ್ರೀವಿಜಯ
ಚ್ಯುತಯಾಥಾಸಂಖ್ಯಾರ್ಥ ಪ್ರತೀತದೋಷಾನುವಸಥಮೆಂದಱೆಗೆ ಬುಧರ್ ಸತತತಮದಱೆಯೆ ನಿದರ್ಶನ ಗತಮಿಂತಕ್ಕುಂ ಪ್ರಮೋದದಿಂ ಕವಿಜನದೊಳ್
--------------
ಶ್ರೀವಿಜಯ
ಜನಜನಮುಮೆಲ್ಲಮೋದಂ ತಡೆಯದೆ ಕಲ್ಗುಂ ಗುರೂಪದೇಶಕ್ರಮದಿಂ ನುಡವಲ್ಮೆಯಲ್ತದೇಂ ಕ ಲ್ತೊಡನೋದುವುವಲ್ತೆ ಗಿಳಿಗಳು ಪುರುಳಿಗಳುಂ
--------------
ಶ್ರೀವಿಜಯ
ಜನಪತಿಗೆ ಒಸಗೆಯಂ ಪುರ ಜನಮೆಲ್ಲಂ ಬೀಱುತಿರ್ಪ್ಪರಾಗಳ್ ತಾಮುಂ ಮನದುತ್ಸವದಿಂ ಕುಣಿವಂ ತನಿಲಾಹತಕೇತನಾಳಿ ಸೊಗಯಿಸಿ ತೋರ್ಕ್ಕುಂ
--------------
ಶ್ರೀವಿಜಯ
ಜನಮಱಿಯದನ್ನೆಗಂ ಮು ನ್ನಂ ನಯಮಱಿದಱಿಪಲಾರ್ಪೊಡದು ಮಂತ್ರಿಗುಣಂ ಜನವಾದಂ ನೆಗೞಿ ನಗ ಧ್ವನಿವೋಲನುಕರಣವಾರ್ತೆ ಮಂತ್ರಿಯ ಗುಣಮೇ
--------------
ಶ್ರೀವಿಜಯ
ಜನಿತ ಪ್ರಗಲ್ಭದೊಳ್ ಮಾ ನನದೊಳ್ ಮಾಹಾತ್ಮ್ಯದೊಳ್ ನಿಜೋದಾರತೆಯೊಳ್ ಅನುಪಮಗುಣಧೊಳ್ ಶ್ರೀಶಂ ಘನಮೆನೆ ಮಾಲೋಪಮಾನ ಭೇದಮಿದಕ್ಕುಂ ಮಾಲೋಪಮೆ
--------------
ಶ್ರೀವಿಜಯ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
--------------
ಶ್ರೀವಿಜಯ
ಜಲದದ ನೆೞಲುಂ ಪರಪುಂ ವಿಲಾಸಮುಂ ಬೆಳಗುವುದಿತ ವಿದ್ಯುಲ್ಲತೆಯುಂ ನೆಲಸವು ಚಲಂಗಳಾದಂ ವಿಲಾಸಿನೀಜನದ ನಲ್ಮೆಯುಂ ಸಂಗಮಮುಂ
--------------
ಶ್ರೀವಿಜಯ
ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ (ಗೋಮೂತ್ರಿಕೆ) ಯಮಕಂ [ಪಾದ] ಪಾದಾರ್ಧ ಸಮಶ್ಲೋಕ [ಸು] ಗೋಚರಂ ಪ್ರಮಿತಾದ್ಯಂತ [ಮಧ್ಯೋ] ಪಕ್ರಮಾನೇಕ ಪ್ರಕಲ್ಪಿತಂ
--------------
ಶ್ರೀವಿಜಯ