ಒಟ್ಟು 1127 ಕಡೆಗಳಲ್ಲಿ , 1 ಕವಿಗಳು , 454 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗೞಿಯಿಸಿದರ್ಥಂ ಸಲೆ ಪಾಂ ಗೞಿಯದೆಯುಂ ಶಬ್ದಮೊಂದದಿರ್ದೊಡೆ ಮುತ್ತುಂ ಮೆೞಸುಂ ಕೋದಂತಿರ್ಕುಂ ಕೞಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ
ಘನಮೆರಡನೆಯದಱೊಳಮಾ ಱನೆಯ ವಿಭಕ್ತಿಯೊಳಮೊಳವು ಗುರುಲಘುಭೇದಂ ಅನಿಯತ ವೃತ್ತಿಯನಱಿದಿದ ನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿಪುಣಂ
ಘನಸ್ತನಿತಮುಂ ಕೇಕಿಸ್ವನಮುಂ ನೀರಧಾರೆಯುಂ ಮನಂ ಬೆರ್ಚಿರ್ಕುಮಿಂತೆತ್ತಂ ಘನಮಿಂತು ಘನಸ್ತನಿ (ಗೂಢಚತುರ್ಥಂ) ನಿನ್ನಿಂ ನಿಂನ್ನನೆನೆಂನಿನಾ ನಾನಾನನನಂ ನನನಂ ನೀನೆಂನನ್ನಂನನಾನಾ ನಿಂನೆನೆನನನೂನನಂ
ಚಲದೆಡೆಗೆ ಪಿರಿದು ರಜಮುಂ ನೆಲನುಂ ಪ್ರಿಯದೆಡೆಗೆ ಕಿಱಿದು ಕೊಳಲುಂ ಕುಡಲುಂ ಚಲಮುಂ ಪ್ರಿಯಮುಂ ಬೞಿ ಸಮ ಬಲಮಾಗಿರೆ ನೆಗೞ್ವಿ ಬಗೆಗೆ ಕಿಱಿದೇಂ ಪಿರಿದೇಂ
ಚ್ಯುತಯಾಥಾಸಂಖ್ಯಾರ್ಥ ಪ್ರತೀತದೋಷಾನುವಸಥಮೆಂದಱೆಗೆ ಬುಧರ್ ಸತತತಮದಱೆಯೆ ನಿದರ್ಶನ ಗತಮಿಂತಕ್ಕುಂ ಪ್ರಮೋದದಿಂ ಕವಿಜನದೊಳ್
ಛಂದಕ್ಕೆ ಬಾರದೆಂದಱಿ ದೊಂದೊಂದಱೊಳೊಂದಿ ಬಂದು ನಿಂದಕ್ಕರಮಂ ಸಂಧಿಸದೆ ಪೇೞ್ದೊಡದು ಕೃತಿ ನಿಂದಿತಮೆಂದುಂ ವಿಸಂಧಿಯೆಂಬುದು ದೋಷಂ
ಜನಪತಿಗೆ ಒಸಗೆಯಂ ಪುರ ಜನಮೆಲ್ಲಂ ಬೀಱುತಿರ್ಪ್ಪರಾಗಳ್ ತಾಮುಂ ಮನದುತ್ಸವದಿಂ ಕುಣಿವಂ ತನಿಲಾಹತಕೇತನಾಳಿ ಸೊಗಯಿಸಿ ತೋರ್ಕ್ಕುಂ
ಜನವಿನುತನನಘನನುಪಮ ನನುನಯಪರನರಸನಿನಿಸು ನೆನೆನೆನೆದು ಮನೋ ಜನಿತಮುದನನಿಲತನಯನ ನನನೃತ ವಚನ ಪ್ರಪಂಚನಿಂತಿರೆ ನುಡಿದಂ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
ಜಲದದ ನೆೞಲುಂ ಪರಪುಂ ವಿಲಾಸಮುಂ ಬೆಳಗುವುದಿತ ವಿದ್ಯುಲ್ಲತೆಯುಂ ನೆಲಸವು ಚಲಂಗಳಾದಂ ವಿಲಾಸಿನೀಜನದ ನಲ್ಮೆಯುಂ ಸಂಗಮಮುಂ
ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ (ಗೋಮೂತ್ರಿಕೆ) ಯಮಕಂ [ಪಾದ] ಪಾದಾರ್ಧ ಸಮಶ್ಲೋಕ [ಸು] ಗೋಚರಂ ಪ್ರಮಿತಾದ್ಯಂತ [ಮಧ್ಯೋ] ಪಕ್ರಮಾನೇಕ ಪ್ರಕಲ್ಪಿತಂ
ಜಲರಾಶಿಪ್ರಭವೆಯನವಿ ಕಲ ಕೃಷ್ಣಗುಣಾನುರಕ್ತೆಯಮ ಮಿಗೆ ಲಕ್ಷ್ಮೀ ಲಲನೆಯನಾಂತುಂ ವಕ್ಷ ಸ್ಥಲದೊಳ್ ಪೇೞಿ೦ತುದಾರ ಚರಿತನೆ ಅಪ್ಪಯ್
ಜಾಣರ್ಕಳಲ್ಲದವರುಂ ಪೂಣಿಗರಱೆಯದೆಯುಮಱೆವವೋಲವಗುಣದಾ ತಾಣಮನಿನಿಸೆಡೆವೆತ್ತೊಡೆ ಮಾಣದೆ ಪಿಡಿದದನೆ ಕೃತಿಗಳಂ ಕೆಡೆನುಡಿವರ್
ಜಾತಿಕ್ರಿಯಾಗುಣದ್ರ ವ್ಯಾತಿಶಯ ವಿಶೇಷಿಯಪ್ಪ ಪದಮೊರ್ಬೞಿನಿಂ ದೀ ತೆಱದಿನುೞಿದ ವಾಕ್ಯಸ ಮೇತಿಗಮುಪಕಾರಯೋಗ್ಯದೀಪಕಮಕ್ಕುಂ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ