ಒಟ್ಟು 538 ಕಡೆಗಳಲ್ಲಿ , 1 ಕವಿಗಳು , 322 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ ನೆನೆವುದಿದನಿಂತು ಕಮಳದೊ ಳನಿಮಿಷಯುಗಮೊಪ್ಪಿ ತೋರ್ಪುದಿಂತಿಮ ಚೋದ್ಯಂ
--------------
ಶ್ರೀವಿಜಯ
ನಗೆಯೆಂಬ ನೆವದೆ ಬೆಳಗೀ ಮೊಗಮೆಂಬೀ ನೆವದೆ ತಿಂಗಳೊಳಗೆಸೆದಾದಂ ಸೊಗಯಿಸಿ ತೋರ್ಕುಂ ಲೋಚನ ಯುಗಮೆಂಬೀ ನೆವದೆ ಲಕ್ಷ್ಮಮೆನೆ ತದ್ವ್ಯಾಜಂ ವ್ಯಾಜರೂಪಕಂ
--------------
ಶ್ರೀವಿಜಯ
ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ ಕಮಳಬಂಧುವೊಳ್ ದಿನಕರನೊಳ್ ಕಡುಗಾಯ್ಪೆನೆ ಸರಸಿಜಮಂ ಕಿಡಿಸಲ್ ತಾಂ ಪೊಕ್ಕುದಾಗ ಬಗೆದಾಕೊಳನಂ
--------------
ಶ್ರೀವಿಜಯ
ನರದಾನಪರೊನೆಂನೆ ನರದಾ ಕೆನರಾಕಮಾ ಅರಿದೈತಂದಾದರಿಕ್ಕುಂ ಪರಿದಾನ ಪರಾದಿಯೆ? (ಅರ್ಧಭ್ರಮಣಂ) ವರದಾನ ಪರಾದನ್ಯಂ ಪರದಾನಪರಾದಮಂ ನೆರದಾವದಿರಾಜನ್ಯಂ ಪರಿಜನಪರಾದಮಂ (ಮುರಜಬಂಧಂ)
--------------
ಶ್ರೀವಿಜಯ
ನರಪತಿ ಬಂದನಾ ನೃಪನನೞ್ತಿಯೆ ಕಾಣ್ಬುದು ತನ್ನರೇಂದ್ರನಿಂ ಧರಣಿ ಸನಾಥೆ ಭೂಪತಿಗೆ ಕಪ್ಪವನಿತ್ತವನೀಶನತ್ತಣಿಂ ಪರಿಭವಮಂ ಕೞಲ್ಚುವುದಧೀಶ್ವರನಾ ದಯೆಸಾಲ್ಗುಮಾ ಮಹೀ ಶ್ವರನೊಳಿದಪ್ಪುದೆಂಬುದಿದು ಕಾರಕಯುಕ್ತ ವಿಭಕ್ತ್ಯನುಕ್ರಮಂ
--------------
ಶ್ರೀವಿಜಯ
ನರಲೋಕಚಂದ್ರ ಮತದಿಂ ಪರಮಾಲಂಕಾರಮುಂ ಶರೀರಮುಮೆಂದಿಂ ತೆರಡಕ್ಕುಂ ಭೇದಂ ಬಹು ಪರಿಕರಮಾ ಕಾವ್ಯವಸ್ತು ಪುರುಷಂಗೆಂದುಂ
--------------
ಶ್ರೀವಿಜಯ
ನಳಿನೋತ್ಪಳಾಳಿರುಚಿಗಳ ನಳಕವಿಲೋಚನಮುಖಂಗಳೀೞ್ಕುಳಿಗೊಳೆ ನೀಂ ತಿಳಿಗೊಳನನೆ ಪೋಲ್ತಿರ್ದುಂ ತಿಳಿಯದುದೇಕೆಂಬುದಿಂತನನ್ವಯಮದಱೊಳ್ ಅನನ್ವಿತ ಯಾಥಾಸಂಖ್ಯ
--------------
ಶ್ರೀವಿಜಯ
ನವವಿವರಾವೃತ ಪೂತಿ ದ್ರವ ತ್ವಗಾವೃತವಿಮಿಶ್ರಮಾಂಸೋಪಚಿತಮ ಧ್ರುವಮಸುಚಿತ್ರಭ್ರಮಿತಾ ಸ್ಥಿವಹಂ ಮೆಯ್ ಬಗೆವೊಡಿಂತು ಕಿಸುಗುಳಮಾದಂ ಭೀಭತ್ಸ
--------------
ಶ್ರೀವಿಜಯ
ನಿಕ್ಕುವಮಿಂತು ಮಾರ್ಗಯುಗದೊಳ್ ತಕ್ಕುದನಱೆಯೆ ಪೇೞ್ದೆನಿನಿಸೊಂದುದ್ದೇಶಮಂ ಮಿಕ್ಕ ಗುಣೋದಯರ್ ಕಳೆಯದೆಂತು ಸ ಯ್ತಕ್ಕುಮಂತಾಗೆ ಬಗೆದು ಪೇೞ್ಗೆ ಕಬ್ಬದೊಳ್ (ಶ್ಲೋಕ)
--------------
ಶ್ರೀವಿಜಯ
ನಿಕ್ಕುವಮಿಂತುಮಲ್ಲದದ (ಱಾ)ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ ಯ್ತಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿಗದಿತ ಯಾಥಾಸಂಖ್ಯಾ ನುಗತವ್ಯತಿರೇಕಯುಗಳ ಲಕ್ಷ್ಯಮಿವಕ್ಕುಂ ಬಗೆಗಾ ದೀಪಕದ ವಿಭಾ ಗ ಗತಿಯನೀ ಭೇದಲಕ್ಷ್ಯಲಕ್ಷಣಯುಗದಿಂ
--------------
ಶ್ರೀವಿಜಯ
ನಿನ್ನಂತೆ ಸುರೇಶ್ವರನು ತ್ಪನ್ನಮಹೈಶ್ವರ್ಯನೆಂಬುದುಂ ಜಲನಿಧಿ ತಾಂ ಸನ್ನುತ ಗಭೀರನೆಂಬುದು ಮಿನ್ನದು ಹೀನಾಧಿಕಪ್ರಶಂಸಾನುಗುಣಂ
--------------
ಶ್ರೀವಿಜಯ
ನಿಯಮಿತಾಕ್ಷರದಿಂದುಪಮಾಪ್ರತಿ ಜ್ಞೆಯನೆ ತಿರ್ದುವುದೞ್ತಿಯಿನಿರ್ದುಮಾ ಬಯಕೆ ತೀರದ ಕಾರಣದಿಂ ವಿಪ ರ್ಯಯಮಿದಭ್ಯುಪಮೋಕ್ತ್ಯುಪದೂಷಣಂ
--------------
ಶ್ರೀವಿಜಯ
ನಿರತಿಶಯಮಕ್ಕುಮದು ಬಂ ಧುರ ಕವಿಜನತಾಪ್ರಯೋಗ ಸಂಬಂಧನದಿಂ ಗುರುಜಘನಸ್ತನಭರಮಂ ಥರಲೀಲಾಲಸವಿಳಾಸಿನೀ ಚಳಿತಂಬೋಲ್
--------------
ಶ್ರೀವಿಜಯ