ಒಟ್ಟು 206 ಕಡೆಗಳಲ್ಲಿ , 1 ಕವಿಗಳು , 163 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಪರೀತಂ ತರುತತಿಯ ವೊ ಲಪರಾಗಂ ಶುದ್ಧಭೂಮಿವೋಲ್ ಪದ್ಮಿನಿವೋ ಲುಪಗತವಿಭ್ರಮ ರಹಿತಂ ಕುಪಿತಾಕೃತಿಯೆಂಬುದುಪಮೆ ಸಂಧಾನಾಂಕಂ ಸಂಧಾನೋಪಮೆ
--------------
ಶ್ರೀವಿಜಯ
ವಿಮಳೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೀ ಕ್ರಮದೊಳ್ ನೆಗೞ್ಚಿ ಗದ್ಯಾ ಶ್ರಮಪದ ಗುರುತಾ ಪ್ರತೀತಿಯಂ ಕೆಯ್ಕೊಂಡರ್
--------------
ಶ್ರೀವಿಜಯ
ವಿರಹಂ ಪರಿತಾಪಮನಾ ಪರಿತಾಪಮುಮಳಿಪನಳಿಪು ಮಾವಲ್ಲಭನೊಳ್ ನೆರೆದಿರ್ಪ ಬಗೆಯನಾ ನೆರೆ ದಿರವುಂ ಸುರತಾನುರಾಗಮಂ ಪೆರ್ಚಿಸುಗುಂ
--------------
ಶ್ರೀವಿಜಯ
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ
--------------
ಶ್ರೀವಿಜಯ
ವಿಳಸಿತ ಸಸ್ಯಸಂಪದಭಿರಾಮಗುಣೋದಯೆ ತಾಳ್ದಿದಳ್ ಧರಾ ಲಳನೆ ವಿಶಾಲಲಕ್ಷ್ಮಿಯನನಾರತಮೆಂಬುದು ದಕ್ಷಿನಾಪಥಂ ಜಳನಿಧಿಮೇಖಲಾವಲಯಿತಾಂಗಿ ಕರಂ ಸೊಗಯಿಪ್ಪುದಾಯ್ತು ಭೂ ಲಳನೆ ವಿಶಾಲಲಕ್ಷ್ಮಿಯನನಾಕುಳಮೆಂಬುದಿದುತ್ತರಾಪಥಂ (ಗೀತಿಕೆ)
--------------
ಶ್ರೀವಿಜಯ
ವಿವಿಧ ವಿಭವ ಶೋಭಾರಂಭ ಲಂಭಪ್ರಲಂಭೋ ದ್ಭವ ವಿಹಿತ ವಿವಾಹೋತ್ಸಾಹ ಸಾಕಲ್ಯ ಕಲ್ಪಂ ಪ್ರವರ ನೃಪಕುಮಾರಾತ್ತೋದಯಾದಿ ಪ್ರಮೋದಾ ಸವಸಮುದಿತ ಸೇವಾರಾತಿ ವೃತ್ತಾಂತ ವೃತ್ತಂ
--------------
ಶ್ರೀವಿಜಯ
ವಿಶದತರಮಾಯ್ತು ಗುಣಮಣಿ ವಿಶೇಷ ಭೂಷಣದಿನೀ ತ್ವದೀಯಾಕಾರಂ ಶಶಧರಕಿರಣಾಭಭವ ದ್ಯಶೋವಿತಾನದಿನಶೇಷಮಾಶಾವಳಿಯಂ ಗುಣಾನುಗತ ಆದಿದೀಪಕಂ
--------------
ಶ್ರೀವಿಜಯ
ವೀರಾದ್ಭುತ ಕರುಣಾ ಶೃಂ ಗಾರ ಭಯಾನಕ ಸರೌದ್ರ ಭೀಭತ್ಸ ಮಹಾ ಸಾರತರ ಹಾಸ್ಯ ಶಾಂತಾ ಧಾರಂ ನವವಿಧವಿಕಲ್ಪಮಾ ರಸಮಾರ್ಗಂ
--------------
ಶ್ರೀವಿಜಯ
ವ್ಯತಿರೇಕ ವಿಕಲ್ಪಮನನು ಗತಕ್ರಮ ವಿಶೇಷಗುಣಕೃತಾಂತಮನೞಿಗೀ ಮತದಿಂ ಯಾಥಾಸಂಖ್ಯಾ ಪ್ರತಿತೀಯಂ ತೋರ್ಪೆನನ್ವಿತಾನನ್ವಿತಮಂ
--------------
ಶ್ರೀವಿಜಯ
ಶಶಧರಬಿಂಬಾನನೆಯಂ ಝಷಕೇತನ ಕೇತನಾಭತನುತನುವಂ ತಾಂ ಬಿಸವಿಶದ ವರ್ಣೆಯಂ ಕಂ ಡೊಸೆದಂ ಬಸದೊಳಗೆ ಜನಕತನಯಳನಣುವಂ
--------------
ಶ್ರೀವಿಜಯ
ಶಾಂತಪ್ರಾಸದ ಭೇದಮ ದಿಂತಕ್ಕುಂ ವರ್ಗದಕ್ಕರಂಗಳ್ ನಾಲ್ಕುಂ ಸಂತಮಿರೆ ಪೇೞ್ದ ತಾಣದೊ ಳಂತಕ್ಕುಂ ಪ್ರಾಕ್ತನೋಕ್ತ ವರ್ಗ ಪ್ರಾಸಂ
--------------
ಶ್ರೀವಿಜಯ
ಶ್ರೀ ವಿದಿತಾರ್ಥಾಲಂಕಾ ರಾವಳಿಯಂ ವಿವಿಧಭೇದ ವಿಭವಾಸ್ಪದಮಂ ಭಾವಿಸಿ ಬೆಸಸಿದನಖಿಳ ಧ ರಾವಲ್ಲಭನಿಂತಮೋಘವರ್ಷ ನೃಪೇಂದ್ರಂ
--------------
ಶ್ರೀವಿಜಯ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ
--------------
ಶ್ರೀವಿಜಯ
ಶ್ಲೇಷೋತ್ಪ್ರೇಕ್ಷಾ ಸೂಕ್ಷ್ಮ ವಿ ಶೇಷ ಸಮಾಹಿತ ಸಮಾಸ ಪರ್ಯಾಯೋಕ್ತಾ ನ್ವೇಷ ವಿರೋಧಾಪ್ರಸ್ತುತ ಶೇಷನಿದರ್ಶನ ಸಹೋಕ್ತಿ ಸಂಕೀರ್ಣಂಗಳ್
--------------
ಶ್ರೀವಿಜಯ
ಸಂಕೀರ್ಣಮೆಂಬುದಕ್ತಾ ಳಂಕಾರಸಮೂಹ ಸಂಕರ ಕ್ರಮಮಕ್ಕುಂ ಶಂಕಾವಿರಹಿತಚಿತ್ತರ ದಂ ಕಾವ್ಯದೊಳಿಂತು ಪೇೞ್ಗೆ ಕವಿವೃಷಭರ್ಕಳ್
--------------
ಶ್ರೀವಿಜಯ